Provide support price of Rs 7,000 and Rs 10,000 for mangoes.
Published on:
Copied
Follow Us
ಶ್ರೀನಿವಾಸಪುರ: ತಾಲೂಕಿನ ಸುಮಾರು ಶೇ.99 ರೈತರು ಮಾವು ಬೆಳೆಯನ್ನು ನಂಬಿ ಜೀವನ ಸಾಗಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಸತತವಾಗಿ ಇಳುವರಿ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ರೈತ ಹಾಗೂ ಸಮಾಜ ಸೇವಕ ಶೀಗಳ್ಳಿ ಬಾಬುರೆಡ್ಡಿ ಕಳವಳ ವ್ಯಕ್ತಪಡಿಸಿದರು.mangoes
ಮಾವು ಬೆಳೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಾರರ ನೆರವಿಗೆ ಸರ್ಕಾರಗಳು ಮುಂದಾಗಬೇಕು ಎಂದು ತಾಲೂಕಿನ ಪುಂಗನೂರು ಕ್ರಾಸ್ನ ಮಾವಿನ ತೋಟದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಆಗ್ರಹಿಸಿದರು.
ಮಾವಿನ ನಾಡು ಎಂದೇ ಪ್ರಸಿದ್ಧಿಯಾದ ಶ್ರೀನಿವಾಸಪುರ ತಾಲೂಕಿನಲ್ಲಿ ಈ ಬಾರಿ ಮಾವು ಕಟಾವು ನಡೆಯುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆ ತೀವ್ರವಾಗಿ ಕುಸಿತ ಕಂಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ತಾಲೂಕಿನಲ್ಲಿ ಸರಿಸುಮಾರು 26,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಪ್ರತಿ ವರ್ಷ 18 ಲ ಮೆಟ್ರಿಕ್ ಟನ್ನಷ್ಟು ಮಾವು ಮಾರುಕಟ್ಟೆಗೆ ಸರಬರಾಜಾಗುತ್ತದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಅದರಲ್ಲೂ ಮುಖ್ಯವಾಗಿ "ತೋತಾಪುರಿ' ತಳಿಯ ಮಾವಿಗೆ ಪ್ರತಿ ಕೆಜಿಗೆ ಕೇವಲ 4 ರಿಂದ 5 ರೂ. ನಿಗದಿಯಾಗಿದೆ. ಇದರಿಂದಾಗಿ ಕನಿಷ್ಠ ಪ ಬೆಳೆಗೆ ಮಾಡಿದ ವೆಚ್ಚವೂ ಸಿಗದೆ ರೈತರು ತೀವ್ರ ಕಂಗಾಲಾಗಿದ್ದಾರೆ. ಹಾಗಾಗಿ ತಣವೇ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ಪ್ರತಿ ಟನ್ ಮಾವಿಗೆ ಕನಿಷ್ಠ 7 ಸಾವಿರ ರೂ. ಬೆಂಬಲ ಬೆಲೆ ೂಷಿಸಬೇಕು ಎಂದು ಆಗ್ರಹಿಸಿದರು.
ಮಾರುಕಟ್ಟೆಯಲ್ಲಿ ರೈತರಿಗೆ ಕನಿಷ್ಠ ಪ್ರತಿ ಕೆಜಿಗೆ 7 ರಿಂದ 10 ರೂ. ಸಿಗುವಂತಾದರೆ ಮಾತ್ರ ಅವರ ಜೀವನೋಪಾಯಕ್ಕೆ ನೆರವಾಗಲಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಬಲ ಸಿಗುತ್ತದೆ. ಸ್ಥಳಿಯ ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳು ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದು, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ತಾಲೂಕಿನ ಮಾವು ಬೆಳೆಗಾರರ ಸಂಕಷ್ಟಕ್ಕೆ ತಣ ಸ್ಪಂದಿಸಿ ಸೂಕ್ತ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು.
ಕೆ.ಎಂ. ಸುರೇಶ್ ಮಾತನಾಡಿ, ಮಾವು ಬೆಳೆಗಾರರು ಮೂರು ವರ್ಷದಿಂದ ನಷ್ಟ ಅನುಭವಿಸುತ್ತಾ ಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮಾವು ಬೆಳೆಗಾರರಿಗೆ ಒಂದು ಟನ್ಗೆ 7 ರಿಂದ 10 ಸಾವಿರ ರೂ. ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಕೃಷ್ಣಾರೆಡ್ಡಿ ಆರ್. ತಿಮ್ಮಸಂದ್ರ, ಮನಿಗಾನಹಳ್ಳಿ ನಾಗರಾಜು, ವೆಂಕಟೇಶ್ ರೆಡ್ಡಿ, ಹಾರುಕುಂಟೆ ಸುರೇಶ್, ಮಾಕನಹಳ್ಳಿ ನಾಗರಾಜ ರೆಡ್ಡಿ, ದೊಡ್ಡಪಲ್ಲಿ ನಾರಾಯಣಸ್ವಾಮಿ, ಆರ್.ತಿಮ್ಮಸಂದ್ರ ದೊಡ್ಡಪ್ಪ, ಮುನಿಯಪ್ಪ, ನಾರಾಯಣಸ್ವಾಮಿ, ಸತೀಶ್ ಸೇರಿದಂತೆ ಅನೇಕ ರೈತರು ಇದ್ದರು.