ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಶಾಲಾ ಪೂರ್ವ ಶಿಕ್ಷಣ, ಆರೋಗ್ಯ ಇಲಾಖೆಯ ವತಿಯಿಂದ ಒದಗಿಸಲಾಗುತ್ತಿರುವ `ತಾಯಿ ಕಾರ್ಡ್, ಉಚಿತ ಆರೋಗ್ಯ ತಪಾಸಣೆ, ಸ್ಕಾ÷್ಯನಿಂಗ್, ಹಿಮೋಗ್ಲೋಬಿನ್ ತಪಾಸಣೆ ಹಾಗೂ ಐರನ್ (ಕಬ್ಬಿಣದ ಅಂಶ) ಮಾತ್ರೆಗಳ ವಿತರಣೆಯನ್ನು ಪರಿಶೀಲಿಸಿದರು. ಅಲ್ಲದೆ ಬಾಣಂತಿಯರ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ಲಸಿಕೆ, ಚುಚ್ಚುಮದ್ದು ನೀಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಂಡರು. ಸ್ಥಳದಲ್ಲಿದ್ದ ಗರ್ಭಿಣಿಯರಿಗೆ ಕೊನೆಯ ಸ್ಕಾ÷್ಯನಿಂಗ್, ಮುಂದಿನ ಸ್ಕಾ÷್ಯನಿಂಗ್ ದಿನಾಂಕ ಹಾಗೂ ಹೆರಿಗೆಯ ನಿರೀಕ್ಷಿತ ದಿನಾಂಕದ (ಇಡಿಡಿ) ಬಗ್ಗೆ ಮಾಹಿತಿ ಪಡೆದರು. ರಕ್ತಹೀನತೆ ತಡೆಯಲು ಹಿಮೋಗ್ಲೋಬಿನ್ ಮಟ್ಟವನ್ನು ಕಾಯ್ದುಕೊಳ್ಳುವುದು ಬಹಳ ಅಗತ್ಯವಾಗಿದ್ದು, ಪೌಷ್ಟಿಕ ಆಹಾರ ಸೇವನೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.