ಆಶ್ರಯ ಕಾಲನಿಗೆ ಮೂಲಸೌಕರ್ಯ ಕಲ್ಪಿಸಿ

ಸೇಡಂ ಊಡಗಿ ರಸ್ತೆಯ ಆಶ್ರಯ ಕಾಲನಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು ನಗರಸಭೆ ಪೌರಾಯಕ್ತ ಶರಣಯ್ಯಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಭೀಮಾಶಂಕರ ಕೊರವಿ, ರವೀಂದ್ರ ಕಾಂಬಳೆ, ಪ್ರಶಾಂತ ಸೇಡಂಕರ್​, ಹಣಮಂತ ಭರತನೂರ, ಬನ್ನಪ್ಪ ವೈದ್ಯ, ಕಾಶಿನಾಥ, ಬಸವರಾಜ ಮುತ್ತಗಿ, ಅಬ್ದುಲ್​ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸೇಡಂನಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯಿಂದ ನಗರಸಭೆಗೆ ಮನವಿ
ಸೇಡಂ: ಊಡಗಿ ರಸ್ತೆಯ ಸರ್ವೇ ನಂ. 892/4ರ ಆಶ್ರಯ ಕಾಲನಿಯಲ್ಲಿ ಜನರು ಕಳೆದ ಹತ್ತಾರು ವರ್ಷಗಳಿಂದ ಮೂಲಸೌಕರ್ಯವಿಲ್ಲದೆ ಪರದಾಡುತ್ತಿದ್ದು, ಕೂಡಲೇ ನಗರಸಭೆಯಿಂದ ಅಭಿವೃದ್ಧಿ ಪಡಿಸಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ತಾಲೂಕು ಅಧ್ಯಕ್ಷ ಭೀಮಾಶಂಕರ ಕೊರವಿ ಹೇಳಿದರು.
ಸೋಮವಾರ ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ ಹಿರೇಮಠ ಅವರಿಗೆ ಮನವಿ ಸಲ್ಲಿಸಿದ ಅವರು ಮಾತನಾಡಿ, ಬಹುತೇಕ ಬಡವರೇ ವಾಸಿಸುವ ಬಡಾವಣೆಯಲ್ಲಿ ರಸ್ತೆ, ಚರಂಡಿ ಸೇರಿ ಯಾವೊಂದು ಮೂಲ ಸೌಲಭ್ಯವಿಲ್ಲದೆ ಇಲ್ಲ. ಸಮರ್ಪಕ ರಸ್ತೆ ಇಲ್ಲದೆ ಇರುವುದರಿಂದ ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಕೂಡಲೇ ನಗರಸಭೆ ಅನುದಾನದಲ್ಲಿ ಜನತೆಗೆ ಅವಶ್ಯಕತೆ ಇರುವ ಕಾಮಗಾರಿ ನಿರ್ವಹಿಸುವಲ್ಲಿ ಕಾಳಜಿವಹಿಸಬೇಕು. ಆ ಮೂಲಕ ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯದರ್ಶಿ ಹಣಮಂತ ಭರತನೂರ, ಪದಾಧಿಕಾರಿಗಳಾದ ರವೀಂದ್ರ ಕಾಂಬಳೆ, ಬನ್ನಪ್ಪ ವೈದ್ಯ, ಪ್ರಶಾಂತ ಸೇಡಂಕರ್​, ಕಾಶಿನಾಥ ಕೊಡಂಗಲ್​ಕರ್​, ಬಸವರಾಜ ಮುತ್ತಗಿ, ಅಬ್ದುಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net