ಲಾನುಭವಿಗಳಿಗೆ ಸೌಲಭ್ಯ ತಲುಪಿಸಿ / DODABALLAPUR

ದೊಡ್ಡಬಳ್ಳಾಪುರದ ತಾಪಂ ಆವರಣದಲ್ಲಿನ ಶಾಸಕರ ಕಚೇರಿ ಬಳಿ ಫಲಾನುಭವಿಗಳಿಗೆ ಶಾಸಕ ಧೀರಜ್​ ಮುನಿರಾಜು ಪಂಪ್​ ಮೋಟಾರ್​ಗಳನ್ನು ವಿತರಿಸಿದರು. ತಾಪಂ ಇಒ ಮಂಜುನಾಥ್​ ಹರ್ತಿ, ನಗರಸಭೆ ಸದಸ್ಯ ಪದ್ಮನಾಭ, ಮುಖಂಡರಾದ ಮನು, ಪ್ರಸನ್ನ, ಬೆರಳಚ್ಚುಗಾರ ನರಸಿಂಹಮೂರ್ತಿ, ಜಿಲ್ಲಾ ಸಂಯೋಜನಕ ರವಿಕುಮಾರ್​, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Published on
ದೊಡ್ಡಬಳ್ಳಾಪುರ : ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಧೀರಜ್​ ಮುನಿರಾಜು ನಿರ್ದೇಶನ ನೀಡಿದರು.
ನಗರದಲ್ಲಿನ ಶಾಸಕರ ಕಚೇರಿ ಬಳಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಸಮಾಜದ ಎಲ್ಲ ವರ್ಗಗಳಿಗೂ ತಲುಪಲು ಕ್ರಮ ಕೈಗೊಳ್ಳಲಾಗಲಾಗುತ್ತಿದೆ. ವಿಶೇಷವಾಗಿ ವಿಕಲಾಂಗರು, ಹಿರಿಯ ನಾಗರಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಬೇಕು. ಫಲಾನುಭವಿಗಳು ಸಹ ಸೌಲಭ್ಯಗಳು ದುರ್ಬಳಕೆಯಾಗದಂತೆ ಎಚ್ಚರವಹಿಸಬೇಕು. ಜನರು ಯೋಜನೆಗಳ ಕುರಿತು ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಡಿ.ದೇವರಾಜ್​ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 3 ಎಲೆಕ್ಟ್ರಿಕಲ್​ ವೀಲ್​ಚೇರ್​, 2 ಸಾಮಾನ್ಯ ವೀಲ್​ಚೇರ್​, 11 ಶ್ರವಣ ಸಾಧನ, ಸಣ್ಣ ವಾಕರ್​ ಸೇರಿ ಅನೇಕ ಸಾಧನಾ ಸಲಕರಣೆ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಪಂಪ್​ ಮೋಟರ್​ ಪೈಪ್​ಗಳನ್ನು ವಿತರಿಸಲಾಯಿತು. ವಿವಿಧ ಇಲಾಖೆಗಳ ಮೂಲಕ ಆಯ್ಕೆಯಾದ ಫಲಾನುಭವಿಗಳಿಗೆ ಅಗತ್ಯ ಸಾಧನಾ -ಸಲಕರಣೆ ಹಸ್ತಾಂತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net