ಭೂಮಿ ಕೊಟ್ಟ ರೈತರಿಗೆ ಪರಿಹಾರ ನೀಡಿ/ DABASPETE

ಕೈಗಾರಿಕೆ ಉದ್ದೇಶಕ್ಕೆ ವಶಕ್ಕೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡುವಂರೆ ಒತ್ತಾಯಿಸಿ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್​ ಅವರನ್ನು ಶಾಸಕ ಎನ್​.ಶ್ರೀನಿವಾಸ್​ ಮತ್ತು ಮುಖಂಡ ಗೋವಿಂದರಾಜು ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಕೈಗಾರಿಕೆ ಉದ್ದೇಶಕ್ಕೆ ವಶಕ್ಕೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡುವಂರೆ ಒತ್ತಾಯಿಸಿ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್​ ಅವರನ್ನು ಶಾಸಕ ಎನ್​.ಶ್ರೀನಿವಾಸ್​ ಮತ್ತು ಮುಖಂಡ ಗೋವಿಂದರಾಜು ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
Published on
ದಾಬಸ್​ಪೇಟೆ : ನೆಲಮಂಗಲ ೇತ್ರದಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರ ಭೂಮಿಯನ್ನು ಈಗ ಕೆಐಎಡಿಬಿ ಭೂಸ್ವಾಧಿನ ಪಡಿಸಿಕೊಂಡಿದೆ. ಆದರೆ, ಹಲವು ರೈತರಿಗೆ ಪರಿಹಾರ ನೀಡಿಲ್ಲ. ಈ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ನೆರವಾಗಬೇಕು ಎಂದು ಶಾಸಕ ಎನ್​.ಶ್ರೀನಿವಾಸ್​ ಮನವಿ ಮಾಡಿದರು.
ಸೋಂಪುರ ಮತ್ತು ತ್ಯಾಮಗೊಂಡ್ಲು ಹೋಬಳಿಯಾದ್ಯಂತ ನಮೂನೆ 53ರಡಿ ಸುಮಾರು 50 ಮಂದಿಯ 80 ಎಕರೆಯಷ್ಟು ಭೂಮಿ ಕೈಗಾರಿಕಾ ಉದ್ದೇಶಕ್ಕೆ ಸ್ವಾಧಿನವಾಗಿದ್ದು, ಈವರೆಗೂ ಪರಿಹಾರ ಸಿಕ್ಕಿಲ್ಲ. ಪರಿಹಾರ ಕೊಡಿಸಬೇಕು ಎಂದು ರೈತರು ಶಾಸಕರಿಗೆ ಒತ್ತಡ ಹೇರಿದ್ದ ಬೆನ್ನೆಲ್ಲೇ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್​ ಅವರನ್ನು ಭೇಟಿ ಮಾಡಿ, ಪರಿಸ್ಥಿತಿ ಬಗ್ಗೆ ವಿವರಿಸಿದರು.
ಮನವಿಗೆ ಸ್ಪಂದಿಸಿದ ಸೆಲ್ವಕುಮಾರ್​, ಸಂಬಂಧಿಸಿದ ಸಿಬ್ಬಂದಿಯನ್ನು ಕರೆಸಿ ಮಾಹಿತಿಪಡೆದು ರೈತರಿಗೆ ಸರ್ಕಾರದ ಮಟ್ಟದಲ್ಲಿ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಈ ವೇಳೆ ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ತ್ಯಾಮಗೊಂಡ್ಲು ಬ್ಲಾಕ್​ ಕಾಂಗ್ರೆಸ್​ ಅಧ್ಯ ಹನುಮಂತೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್​ ಇದ್ದರು.

ಸರ್ಕಾರದ ಹಂತದಲ್ಲಿ ೇತ್ರದ ಮತದಾರರಿಗೆ ಯಾವುದೇ ರೀತಿಯಲ್ಲಿಯೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಈಗ ನಮೂನೆ 53ರಡಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಯತ್ನ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net