ಸಿಂಧನೂರಿನಲ್ಲಿ ಸಾರಿಗೆ ಘಟಕ ವ್ಯವಸ್ಥಾಪಕ ಹೊನ್ನಪ್ಪಗೆ ವಿವಿಧ ಖಾಸಗಿ ಕಾಲೇಜ್‌ಗಳು ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಸೋಮವಾರ ಮನವಿ ಸಲ್ಲಿಸಿದರು. ಖಾಸಗಿ ಕಾಲೇಜ್‌ಗಳ ಆಡಳಿತ ಮಂಡಳಿ ಒಕ್ಕೂಟದ ತಾಲೂಕು ಅಧ್ಯಕ್ಷ ಎನ್.ಸತೀಶ, ವಿವಿಧ ಕಾಲೇಜ್‌ಗಳ ಆಡಳಿತ ಮಂಡಳಿಯ ಬಸವರಾಜ ಬಾದರ್ಲಿ, ಪರಶುರಾಮ ಮಲ್ಲಾಪುರ ಇತರರಿದ್ದರು.
ಸಿಂಧನೂರು: ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಿವಿಧ ಖಾಸಗಿ ಕಾಲೇಜ್‌ಗಳು ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಸೋಮವಾರ ಡಿಪೋ ವ್ಯವಸ್ಥಾಪಕ ಹೊನ್ನಪ್ಪಗೆ ಮನವಿ ಸಲ್ಲಿಸಿದರು.
ಪಿಯು, ಪದವಿ ಕಾಲೇಜ್‌ಗಳಿಗೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿದ್ದು, ಹಾಸ್ಟೆಲ್‌ಗಳಿಂದ ಕಾಲೇಜ್‌ಗಳು ಎರಡ್ಮೂರು ಕಿಮೀ ದೂರದಲ್ಲಿವೆ. ನಿತ್ಯ ಬೆಳಗ್ಗೆ ನಡೆದುಕೊಂಡು ಬಂದು ಹೋಗಲು ತೊಂದರೆಯಾಗುತ್ತಿದ್ದು, ಶಾಲೆ, ಕಾಲೇಜ್ ಸಮಯಕ್ಕೆ ಹೋಗಿ-ಬರಲು ಅನುಗುಣವಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಶಾಸಕ ಸ್ಪಂದನೆ: ವಿದ್ಯಾರ್ಥಿಗಳ ಸಮಸ್ಯೆ ಕುರಿತು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ವಿವಿಧ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಮನವರಿಕೆ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕ, ರಾಯಚೂರು ಸಾರಿಗೆ ಸಂಸ್ಥೆ ಡಿಸಿ ಜತೆಗೆ ದೂರವಾಣಿಯಲ್ಲಿ ಮಾತನಾಡಿ, ಕೂಡಲೇ ವಸತಿ ನಿಲಯಗಳಿರುವ ಸ್ಥಳಗಳಿಗೆ ಕಾಲೇಜ್ ಸಮಯಕ್ಕೆ ವಿದ್ಯಾರ್ಥಿಗಳನ್ನು ಕರೆದು ತರುವುದು, ಬಿಡುವುದಕ್ಕೆ ಬಸ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.