ಬಿಎಲ್‌ಎಗಳಿಗೆ ಸೂಕ್ತ ಮಾಹಿತಿ ನೀಡಿ

ಪಿರಿಯಾಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಬಿಎಲ್‌ಎ 2 ಕಾರ್ಯಾಗಾರದ ಪೂರ್ವಭಾವಿ ಸಭೆಯನ್ನು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಉದ್ಘಾಟಿಸಿದರು. ವಿ.ರಾಜೇಂದ್ರ, ಎಚ್.ಸಿ.ಬಸವರಾಜ್, ರಾಮಚಂದ್ರಗೌಡ, ಪರೀಕ್ಷಿತ್ ರಾಜ್, ವಿನಯ್ ಕುಮಾರ್, ಕೆ.ಎನ್.ಸೋಮಶೇಖರ್ ಇತರರು ಇದ್ದಾರೆ.
ಪಿರಿಯಾಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಬಿಎಲ್‌ಎ 2 ಕಾರ್ಯಾಗಾರದ ಪೂರ್ವಭಾವಿ ಸಭೆಯನ್ನು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಉದ್ಘಾಟಿಸಿದರು. ವಿ.ರಾಜೇಂದ್ರ, ಎಚ್.ಸಿ.ಬಸವರಾಜ್, ರಾಮಚಂದ್ರಗೌಡ, ಪರೀಕ್ಷಿತ್ ರಾಜ್, ವಿನಯ್ ಕುಮಾರ್, ಕೆ.ಎನ್.ಸೋಮಶೇಖರ್ ಇತರರು ಇದ್ದಾರೆ.
Published on
ಪಿರಿಯಾಪಟ್ಟಣ: ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಸಂದರ್ಭದಲ್ಲಿ ಬಿಜೆಪಿಯ ಬಿಎಲ್‌ಗಳು ಮತದಾರರ ಬಗ್ಗೆ ಸೂಕ್ತವಾದ ಮಾಹಿತಿ ನೀಡಲು ಸಿದ್ಧರಾಗಿರಬೇಕು ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಎಲ್‌ಎ 2 ಕಾರ್ಯಗಾರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ 234 ಬೂತ್‌ಗಳಲ್ಲೂ ಬಿಜೆಪಿ ಪಕ್ಷದ ಬಿಎಲ್‌ಎ(2)ಗಳ ನೇಮಕವಾಗಲಿದ್ದು, ಅವರು ಗ್ರಾಮದ ಪ್ರತಿಯೊಬ್ಬರ ಮಾಹಿತಿ ಹೊಂದಿರಬೇಕು ಎಂದರು.

ರಾಜ್ಯದಲ್ಲಿ ಚುನಾವಣಾ ಆಯೋಗವು ಅಧಿಕೃತವಾಗಿ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ (ಎಸ್‌ಎಆರ್ ) ಆರಂಭಿಸಿದಾಗ ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಇರುವವರನ್ನು ಗುರುತಿಸಿ ಅಂತಹವರನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಬೇಕು. ಜತೆಗೆ ಮತದಾರರ ಪಟ್ಟಿಯಲ್ಲಿ ಇಲ್ಲದಿರುವವರನ್ನು ಕಡ್ಡಾಯವಾಗಿ ಸೇರ್ಪಡೆಗೊಳಿಸಲು ಮುಂದಾಗಬೇಕು ಎಂದರು.

ಕಾಂಗ್ರೆಸ್ ಪಕ್ಷದವರು ಬಿಜೆಪಿ ಪಕ್ಷದ ವಿರುದ್ಧ ವೋಟ್ ಚೋರಿ ಅಭಿಯಾನದಲ್ಲಿ ನಿರತರಾಗಿರುವುದು ಹಾಸ್ಯಾಸ್ಪದವಾಗಿದ್ದು, ಬಿಹಾರದಲ್ಲಿ ಸುಮಾರು 65 ಸಾವಿರ ವಲಸಿಗ ಮತದಾರರನ್ನು ತೆಗೆದು ಹಾಕಿದ ಬಳಿಕ ಎನ್‌ಡಿಎ ಮಿತ್ರಕೂಟ ಹೆಚ್ಚುವರಿಯಾಗಿ 60 ಕ್ಷೇತ್ರಗಳಲ್ಲಿ ಜಯಗಳಿಸಿದೆ ಎಂದರು.

ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ನಮ್ಮ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಯೋನ್ಮುಖರಾಗಬೇಕಿದೆ ಎಂದರು.

ಮಾಜಿ ಶಾಸಕ ಎಚ್.ಸಿ.ಬಸವರಾಜ್ ಮಾತನಾಡಿ, ವಿರೋಧ ಪಕ್ಷಗಳು ತಾವು ಹೀನಾಯವಾಗಿ ಸೋತಿರುವ ಕ್ಷೇತ್ರಗಳಲ್ಲಿ ವೋಟ್ ಚೋರಿ ನಡೆದಿದೆ ಎಂದು ಸುಳ್ಳು ಪ್ರಚಾರ ನಡೆಸುತ್ತಿರುವುದು ಅವರ ಹತಾಶೆಯ ಪ್ರತಿಕವಾಗಿದೆ ಎಂದರು.
ಬಿಜೆಪಿ ಪಕ್ಷದ ವತಿಯಿಂದ ಪ್ರತಿ ಮನೆಮನೆಯಲ್ಲಿ ಇರುವ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಅಧ್ಯಕ್ಷ ವಿ.ರಾಜೇಂದ್ರ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಜಯರಾಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರಗೌಡ, ಮುಖಂಡರಾದ ಪರೀಕ್ಷಿತ್‌ರಾಜ್, ವಿನಯ್ ಕುಮಾರ್, ಕೆ.ಎನ್.ಸೋಮಶೇಖರ್, ಪಿ.ಜೆ.ರವಿ, ಬೆಮ್ಮತಿ ಚಂದ್ರು, ಲೋಕಪಾಲಯ್ಯ, ಚನ್ನಬಸವರಾಜು, ರವಿ, ಸುಂದರ್, ಆರ್.ಟಿ.ಸತೀಶ್, ಎಂ.ಎಂ.ರಾಜೇಗೌಡ, ಜಿ.ಸಿ.ವಿಕ್ರಂ ರಾಜ್, ಟಿ.ರಮೇಶ್, ಮಲ್ಲೇಶ್, ಕೆ.ಕೆ.ಶಶಿ, ದೇವೇಂದ್ರ, ಮೋಹನ್ ಲಾಲ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net