ಅಧಿಕಾರಿಗಳಿಗೆ ಸೂಕ್ತ ದಾಖಲೆ ಒದಗಿಸಿ / HOSAKOTE

ಹೊಸಕೋಟೆ ತಾಲೂಕಿನ ಯಡಗೊಂದನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಿಎಲ್​ಎ ತರಬೇತಿ ಕಾರ್ಯಾಗಾರದಲ್ಲಿ ಪಕ್ಷದ ಮುಖಂಡರನ್ನು ಸನ್ಮಾನಿಸಲಾಯಿತು.  ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಎಸ್​.ಆರ್​ ಗೌಡ, ಮುಖಂಡರಾದ ಸಮೇತನಹಳ್ಳಿ ಸೊಣ್ಣಪ್ಪ, ಬಾಬು ರೆಡ್ಡಿ, ಮುತ್ಕೂರು ಮುನಿರಾಜ್​, ರಾಧಾಕೃಷ್ಣ, ಕಾಂತರಾಜ್​, ಆನಂದಾಚಾರಿ, ಲತಾ ರೆಡ್ಡಿ ಇದ್ದರು.
ಹೊಸಕೋಟೆ ತಾಲೂಕಿನ ಯಡಗೊಂದನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಿಎಲ್​ಎ ತರಬೇತಿ ಕಾರ್ಯಾಗಾರದಲ್ಲಿ ಪಕ್ಷದ ಮುಖಂಡರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಎಸ್​.ಆರ್​ ಗೌಡ, ಮುಖಂಡರಾದ ಸಮೇತನಹಳ್ಳಿ ಸೊಣ್ಣಪ್ಪ, ಬಾಬು ರೆಡ್ಡಿ, ಮುತ್ಕೂರು ಮುನಿರಾಜ್​, ರಾಧಾಕೃಷ್ಣ, ಕಾಂತರಾಜ್​, ಆನಂದಾಚಾರಿ, ಲತಾ ರೆಡ್ಡಿ ಇದ್ದರು.
Published on
ಹೊಸಕೋಟೆ : ಪ್ರತಿಯೊಬ್ಬ ಬಿಎಲ್​ಒಗಳ ಜತೆ ಪಕ್ಷದ ಬೂತ್​ ಏಜೆಂಟ್​ರನ್ನು ನೇಮಿಸುವ ಮೂಲಕ ಮತಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಮತದಾರರು ಗೊಂದಲಕ್ಕೀಡಾಗುವುದು ಬೇಡ ಎಂದು ನಿಮ್ಮನ್ನು ನೇಮಕ ಮಾಡಲಾಗಿದ್ದು, ಸೂಕ್ತ ದಾಖಲೆಗಳನ್ನು ಅಧಿಕಾರಿಗಳಿಗೆ ಒದಗಿಸಿ ಮತಪಟ್ಟಿಯಲ್ಲಿ ಮತದಾರರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಯಡಗೊಂಡನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಬಿಎಲ್​ಎ&2 ಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮುಖಂಡ ಭೋದನಹೊಸಳ್ಳಿ ಪ್ರಕಾಶ್​ ಮಾತನಾಡಿ, ಗ್ರಾಮೀಣ ಬಾಗದ ಜನರಿಗೆ ದಾಖಲೆಗಳ ಬಗ್ಗೆ ಹೆಚ್ಚು ಅರುವು ಇಲ್ಲದ ಕಾರಣ ಗೊಂದಲಕ್ಕೀಡಾಗುತ್ತಾರೆ. ಸಂವಿಧಾನ ನೀಡುರುವ ಹಕ್ಕನ್ನು ನಾವು ಚಲಾಯಿಸಲು ಅವರ ಹೆಸರು ಮತಪಟ್ಟಿಯಲ್ಲಿರಬೇಕು. ಕೆಲವರ ನಿರಾಸಕ್ತಿಯಿಂದ ದಾಖಲೆ ಒದಗಿಸದೆ ಸುಮ್ಮನಿದ್ದು ಬಿಡುತ್ತಾರೆ. ಆದುದರಿಂದ ಅಂತಹವರಿಗೆ ಸೂಕ್ತ ಮಾಹಿತಿ ನೀಡಿ ಅವರಲ್ಲಿನ ದಾಖಲೆಗಳನ್ನು ತರುವಂತೆ ಜಾಗೃತಿ ಮೂಡಿಸಬೇಕು ಎಂದರು.
ಮೃತಪಟ್ಟವರು, ಮದುವೆಯಾಗಿ ಗಂಡನ ಮನೆಗೆ ಹೋಗಿರುವ ಹೆಣ್ಣು ಮಕ್ಕಳ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿ, ಈ ಹಿಂದೆ 2002ರಲ್ಲಿ ಮತ ಚಲಾಯಿಸಿದ್ದ ಸಂದರ್ಭದಲ್ಲಿ ಅವರ ಹೆಸರು ಹಾಗೂ ಮತಗಟ್ಟೆ ಸಂಖ್ಯೆ ಸಮೇತ ದಾಖಲೆಗಳಲ್ಲಿ ನಮೂದಿಸಲಾಗಿರುತ್ತದೆ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯೆ ಲಕ್ಷಿ$್ಮ ಮಾತನಾಡಿ, ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಮುಂದಾಗಿದ್ದೆ, ಇದರಿಂದ ಮತಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಎರಡು ಹೆಸರುಗಳನ್ನು ತೆಗೆಯಬಹುದು. ಅಕ್ರಮ ಮತದಾನ ತಡೆಯಬಹುದಾಗಿದ್ದು, ರಾಜ್ಯದಲ್ಲಿ ಸರ್ಕಾರ ಪ್ರಾಮಾಣೀಕವಾಗಿ ಎಸ್​ಐಆರ್​ ಪ್ರಕ್ರಿಯೆ ಮಾಡಿಸುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net