ಮನರೇಗಾ ಕೂಲಿಕಾರರಿಗೆ ಸಮರ್ಪಕ ಸೌಲಭ್ಯ ಒದಗಿಸಿ

ದೇವರಹಿಪ್ಪರಗಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ನಡೆದ ಮನರೇಗಾ ಕಾಮಗಾರಿಯನ್ನು ತಾಪಂ ಇಒ ಭಾರತಿ ಚೆಲುವಯ್ಯ ಪರಿಶೀಲನೆ ನಡೆಸಿದರು. ಪಿಡಿಒ ಎಂ.ಎನ್. ಕತ್ತಿ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ತಾಂಡ ರೋಜ್ಗಾರ್ ಮಿತ್ರ ವಿನೋದ್ ಚವಾಣ್ ಮತ್ತಿತರರಿದ್ದರು.
ದೇವರಹಿಪ್ಪರಗಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ನಡೆದ ಮನರೇಗಾ ಕಾಮಗಾರಿಯನ್ನು ತಾಪಂ ಇಒ ಭಾರತಿ ಚೆಲುವಯ್ಯ ಪರಿಶೀಲನೆ ನಡೆಸಿದರು. ಪಿಡಿಒ ಎಂ.ಎನ್. ಕತ್ತಿ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ತಾಂಡ ರೋಜ್ಗಾರ್ ಮಿತ್ರ ವಿನೋದ್ ಚವಾಣ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಒ ಭಾರತಿ ಚೆಲುವಯ್ಯ ಸೂಚನೆ
  • ಸರ್ಕಾರಿ ನಾಲಾ ಹೂಳು ತೆಗೆಯುವ ಕಾಮಗಾರಿ ಪರಿಶೀಲನೆ
ದೇವರಹಿಪ್ಪರಗಿ: ನರೇಗಾ ಯೋಜನೆಯಡಿಯಲ್ಲಿ ನಡೆಯುವ ಕಾಮಗಾರಿ ಗುಣಮಟ್ಟದ್ದಾಗಿರಬೇಕು. ಮನರೇಗಾ ಯೋಜನೆಯಡಿಯ ಕೂಲಿಕಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ ಚೆಲುವಯ್ಯ ಹೇಳಿದರು.
ತಾಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರವಾಡಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಡೆಯುತ್ತಿರುವ ಸರ್ಕಾರಿ ನಾಲಾ ಹೂಳು ತೆಗೆಯುವ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ಸರ್ಕಾರ ಉದ್ಯೋಗ ಸೃಜನೆಗಾಗಿ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರಿಗೂ ಕೆಲಸ ನೀಡಬೇಕೆಂಬ ಸದುದ್ದೇಶದಿಂದ ನರೇಗಾ ಯೋಜನೆ ಜಾರಿಗೆ ತಂದಿದ್ದು, ಗ್ರಾಮೀಣ ಭಾಗದ ಜನರು ಇದರ
ಸದುಪಯೋಗ ಪಡೆದುಕೊಳ್ಳಬೇಕು. ಕೂಲಿಕಾರರಿಗೆ ಅಗತ್ಯವಾದ ಕುಡಿಯುವ ನೀರು, ನೆರಳು ಹಾಗೂ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಪಿಡಿಒಗೆ ಸೂಚನೆ ನೀಡಿದರು. ಕಾಮಗಾರಿ ಗುಣಮಟ್ಟ ಕಾಪಾಡುವ ಜತೆಗೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಮಾರ್ಗದರ್ಶನ ನೀಡಿದರು.
ಮನರೇಗಾ ಯೋಜನೆಯ ಉದ್ದೇಶ ಕೂಲಿಕಾರರ ಹಕ್ಕು, ಸರ್ಕಾರದಿಂದ ದೊರೆಯುವ ಸೌಲಭ್ಯ ಹಾಗೂ ಕೆಲಸದ ಸ್ಥಳದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಕೂಲಿಕಾರರೊಂದಿಗೆ ಸಂವಾದ ನಡೆಸಿ ಅವರು ಮಾಹಿತಿ ನೀಡಿದರು. ನಂತರ ಹಾಜರಾತಿ ದಾಖಲಾತಿಗಳನ್ನು ವೀಕ್ಷಿಸಿದರು.
ಸಹಾಯಕ ನಿರ್ದೇಶಕ ಗ್ರಾಮೀಣ ಉದ್ಯೋಗ ಶಾಂತಗೌಡ ನ್ಯಾಮಣ್ಣವರ ಮಾತನಾಡಿ, ನೀಡಿರುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿ, ಗ್ರಾಮದಲ್ಲಿನ ಕೂಲಿಕಾರರು ಹಾಗೂ ಸಂಬಂಧಿಕರಿಗೂ ಮನರೇಗಾ ಯೋಜನೆಯಡಿ ಉದ್ಯೋಗಾವಕಾಶ ದೊರೆಯುವ ಕುರಿತು ಜಾಗತಿ ಮೂಡಿಸಿ ಎಂದು ತಿಳಿಸಿದರು.
ಪಿಡಿಒ ಎಂ.ಎನ್. ಕತ್ತಿ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ತಾಂಡ ರೋಜ್ಗಾರ್ ಮಿತ್ರ ವಿನೋದ್ ಚವಾಣ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net