ರೈತರಿಗೆ ಸಮರ್ಪಕ ವಿದ್ಯುತ್​ ಪೂರೈಸಿ / DODABALLAPUR

ದೊಡ್ಡಬೆಳವಂಗಲ ಬೆಸ್ಕಾಂ ಕಚೇರಿ ಮುಂದೆ ವಿದ್ಯುತ್​ ಪೂರೈಕೆ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ರೈತರಾದ ಪುಟ್ಟಶಾಮಯ್ಯ, ಗೋಪಿನಾಥ್​, ಸತ್ಯನಾರಾಯಣ, ಸಂತೋಷ್​, ಅರುಣ್​ ಕುಮಾರ್​, ಚಂದ್ರಶೇಖರ್​, ಭರತ್​ ಕುಮಾರ್​, ಹರೀಶ್​, ಸುರೇಶ್​, ಮಹೇಶ್​, ದೇವರಾಜ್​ ಇತರರು ಇದ್ದರು.
ದೊಡ್ಡಬೆಳವಂಗಲ ಬೆಸ್ಕಾಂ ಕಚೇರಿ ಮುಂದೆ ವಿದ್ಯುತ್​ ಪೂರೈಕೆ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ರೈತರಾದ ಪುಟ್ಟಶಾಮಯ್ಯ, ಗೋಪಿನಾಥ್​, ಸತ್ಯನಾರಾಯಣ, ಸಂತೋಷ್​, ಅರುಣ್​ ಕುಮಾರ್​, ಚಂದ್ರಶೇಖರ್​, ಭರತ್​ ಕುಮಾರ್​, ಹರೀಶ್​, ಸುರೇಶ್​, ಮಹೇಶ್​, ದೇವರಾಜ್​ ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ರೈತರಿಗೆ ಈಗಾಗಲೇ ಮಳೆ ಕೊರತೆ ಎದುರಾಗಿದೆ. ಇದರ ಮಧ್ಯೆ ವಿದ್ಯುತ್​ ಪೂರೈಕೆಯಲ್ಲೂ ಸಮಸ್ಯೆ ಆಗುತ್ತಿರುವುದರಿಂದ ಬೋರ್​ವೆಲ್​ ಮೂಲಕವೂ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಬೆಸ್ಕಾಂ ರೈತರ ಅಗತ್ಯಕ್ಕೆ ಅನುಸಾರ ವಿದ್ಯುತ್​ ಸರಬರಾಜು ಮಾಡಬೇಕು ಎಂದು ರೈತ ಮುಖಂಡ ರಾಜಶೇಖರಯ್ಯ ಆಗ್ರಹಿಸಿದರು.
ತಾಲೂಕಿನ ದೊಡ್ಡಬೆಳವಂಗಲ ಬೆಸ್ಕಾಂ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,1200 ಅಡಿ ಕೊರೆದರೂ ನೀರು ಬರುತ್ತಿಲ್ಲ. ಲಭ್ಯ ನೀರು ಹಾಯಿಸಲು ವಿದ್ಯುತ್​ ಪೂರೈಕೆ ಸಮರ್ಪಕವಾಗಿರದೆ ಸಮಸ್ಯೆ ಎದುರಿಸುವಂತಾಗಿದೆ. 24 ಗಂಟೆ ವಿದ್ಯುತ್​ ನೀಡುತ್ತೇವೆ ಎನ್ನುತ್ತಾರೆ, ಆದರೇ ನೀಡುವುದಿಲ್ಲ. ವಿದ್ಯುತ್​ ಪೂರೈಕೆ ಬಗ್ಗೆ ಕೇಳಿದರೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈಗಾಗಲೇ ಬೆಳೆಗಳು ಒಣಗುತ್ತಿವೆ, ಆದರೂ ವಿದ್ಯುತ್​ ಪೂರೈಕೆ ಮಾಡುತ್ತಿಲ್ಲ. ಬೇರೆಯವರಿಗೆ ಅಧಿಕಾರಿಗಳು ಶೀಘ್ರ ಸ್ಪಂದಿಸುತ್ತಾರೆ, ರೈತರಿಗೆ ಮಾತ್ರ ಸ್ಪಂದಿಸುತ್ತಿಲ್ಲ. ರೈತರಿಗೆ ನಿಯಮಾನುಸಾರ ವಿದ್ಯುತ್​ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಮಹೇಶ್​ ಮಾತನಾಡಿ, ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆ ಬಗ್ಗೆ ಗಮನಿಸಬೇಕು. ಇಂಜಿನಿಯರ್​ ಸರಿಯಾಗಿ ಸ್ಪಂದಿಸುತ್ತಿಲ್ಲ. ವಿದ್ಯುತ್​ ಕಣ್ಣಾಮುಚ್ಚಾಲೆ ಆಡುತ್ತಲೇ ಇದೆ, ರೈತರು ಏನು ಮಾಡಬೇಕು? ಮಳೆಯೂ ಕೈಕೊಟ್ಟಿದೆ. ವಾಣಿಜ್ಯ ಕಾರಣಕ್ಕೆ ನೀಡುವ ವಿದ್ಯುತ್​ ಪೂರೈಕೆ ರೈತರಿಗೆ ಏಕೆ ನೀಡುವುದಿಲ್ಲ? ಇದೇ ರೀತಿ ರ್ನಿಲಕ್ಷ$್ಯ ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಬೆಸ್ಕಾಂ ಗ್ರಾಮಾಂತರ ವಿಭಾಗದ ಎಇಇ ಮಂಜುನಾಥ್​ ಮಾತನಾಡಿ, ಮಳೆ ಕೊರತೆಯಿಂದ ರಾಜ್ಯದಲ್ಲಿ ಲೋಡ್​ ಶೆಡ್ಡಿಂಗ್​ ಮಾಡಲಾಗುತ್ತಿದೆ. ಪರ್ಯಾಯ ವ್ಯವಸ್ಥೆಗೆ ಕ್ರಮವಹಿಸಲಾಗುತ್ತಿದೆ. ವಿದ್ಯುತ್​ ಉತ್ಪಾದನೆಯಲ್ಲಿ ಸಮಸ್ಯೆಯಾದ ಕಾರಣ ಪೂರೈಕೆಗೆ ಅಡೆತಡೆ ಉಂಟಾಗುತ್ತಿದೆ. ಶ್ರೀದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net