ಡಿಸಿಸಿ ಬ್ಯಾಂಕ್ ಎದುರು ಧರಣಿ

ಬಾಗಲಕೋಟೆ ಡಿಸಿಸಿ ಬ್ಯಾಂಕ್ ಎದುರು ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಸಾಲ ಹಾಗೂ ಇತರೆ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಸಂಘಗಳ ಒಕ್ಕೂಟದಿಂದ ಕುರಿಗಳ ಸಮೇತ ಪ್ರತಿಭಟನೆ ನಡೆಸಿದರು. ಮಹಾಲಿಂಗ ಮಾಯಣ್ಣವರ, ಶಿವಲಿಂಗ ನಿಂಗನೂರ, ಈರಣ್ಣ ಹಳೆಗೌಡರ, ಸಂಜೀವ ಹಾಡಕರ, ಮಲ್ಲಪ್ಪ ಸಿಂಗಡಿ, ಮಹೇಶ ಬೆಂಕಿ, ವೀರಣ್ಣ ಹಳೇಗೌಡ ಇತರರಿದ್ದರು.
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಎದುರು ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಸಾಲ ಹಾಗೂ ಇತರೆ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಸಂಘಗಳ ಒಕ್ಕೂಟದಿಂದ ಕುರಿಗಳ ಸಮೇತ ಪ್ರತಿಭಟನೆ ನಡೆಸಿದರು. ಮಹಾಲಿಂಗ ಮಾಯಣ್ಣವರ, ಶಿವಲಿಂಗ ನಿಂಗನೂರ, ಈರಣ್ಣ ಹಳೆಗೌಡರ, ಸಂಜೀವ ಹಾಡಕರ, ಮಲ್ಲಪ್ಪ ಸಿಂಗಡಿ, ಮಹೇಶ ಬೆಂಕಿ, ವೀರಣ್ಣ ಹಳೇಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಣ್ಣೆ ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆಯೋಜನೆ
  • ಶೂನ್ಯ ಬಡ್ಡಿ ದರದಲ್ಲಿ ಸಾಲಕ್ಕೆ ಆಗ್ರಹ
ಬಾಗಲಕೋಟೆ: ಜಿಲ್ಲೆಯಲ್ಲಿರುವ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಸಾಲ ಹಾಗೂ ಇತರೆ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಸಂಘಗಳ ಒಕ್ಕೂಟದಿಂದ ಬಾಗಲಕೋಟೆ ಡಿಸಿಸಿ ಬ್ಯಾಂಕ್ ಮುಂದೆ ಕುರಿಗಳ ಸಮೇತ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ಪಿಕೆಪಿಎಸ್, ಸಹಕಾರ ಸಂಘ, ನೇಕಾರ ಸಹಕಾರು ಸಂಘ ಹಾಗೂ ಇತರೆ ಸಹಕಾರ ಸಂಘಗಳಿಗೆ ನೀಡುವಂತೆ ಡಿಸಿಸಿ ಬ್ಯಾಂಕಿನಿಂದ ಕುರಿ ಸಂಗೋಪನೆ ಸಂಘಗಳಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ಆಗ್ರಹಿಸಿ, ಸೆ. 22ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಾಲ ನೀಡುವ ಬಗ್ಗೆ ಠರಾವು ಅಂಗೀಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಸಹಕಾರ ಸಂಘದ ಷೇರಿನ ವಂತಿಗೆಯನ್ನು 25 ಸಾವಿರ ರೂ.ಗೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಈ ಮೊತ್ತ ಪಾವತಿಸಲು ಹೊರೆಯಾಗುತ್ತಿದೆ. ಈಗಿರುವ 10 ಸಾವಿರ ರೂ. ಮೊತ್ತವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬ್ಯಾಂಕಿನ ಅಧಿಕಾರಿ, ಈ ಬಗ್ಗೆ 22ರಂದು ನಡೆಯುವ ಸರ್ವ ಸಾಧಾರಣ ಸಭೆಯಲ್ಲಿ ತಾವು ಪ್ರಸ್ತಾಪಿಸಬೇಕು. ಹಾಗೂ ಶೂನ್ಯ ಬಡ್ಡಿ ದರದಲ್ಲಿ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳ ಮೂಲಕ ವಿತರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಾಗುತ್ತದೆ. ಇದು ಅಲ್ಲಿ ತೀರ್ಮಾನ ಆಗಬೇಕು. ಹಾಗೆಯೇ ಸಂಗೋಪನೆಯಲ್ಲಿ ಕುರಿ ಸಾಲಕ್ಕೂ ಅವಕಾಶ ಇದ್ದು, ಈ ಬಗ್ಗೆ ಪಿಕೆಪಿಎಸ್‌ಗಳಿಗೆ ಇವತ್ತೆ ಲಿಖಿತ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಮಹಾಲಿಂಗ ಮಾಯಣ್ಣವರ, ಶಿವಲಿಂಗ ನಿಂಗನೂರ, ಈರಣ್ಣ ಹಳೆಗೌಡರ, ಸಂಜೀವ ಹಾಡಕರ, ಮಲ್ಲಪ್ಪ ಸಿಂಗಡಿ, ಮಹೇಶ ಬೆಂಕಿ, ವೀರಣ್ಣ ಹಳೇಗೌಡ, ಡಿ.ಬಿ. ಸಿದ್ದಾಪುರ, ಯಲ್ಲಪ್ಪ ಹೆಗಡೆ, ಪರಪ್ಪ ವಗ್ಗ, ಕರೆಪ್ಪ ಬುಜಿಂಗ, ಭೀಮಪ್ಪ ಕೇದಾರಿ, ಮಾಳು ಆಲಕನೂರ, ಮೌಲಾ ಪೆಂಡಾರಿ, ರಮೇಶ ಹಿರಕನ್ನವರ, ಮಣಿಗೆಪ್ಪ ಕುಂಚನೂರ, ಮಹಾಲಿಂಗಪ್ಪ ಮುಧೋಳ, ಬಸವರಾಜ ತೆಲಗಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net