ಮುಡಿಗುಂಡ ನಿವಾಸಿಗಳಿಂದ ಪ್ರತಿಭಟನೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿ ನಿಂದಿಸಿರುವ ಮಂಜುನಾಥ್ ಎಂಬಾತನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಮುಡಿಗುಂಡ ನಿವಾಸಿಗಳು ಬುಧವಾರ ಪ್ರತಿಭಟಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿ ನಿಂದಿಸಿರುವ ಮಂಜುನಾಥ್ ಎಂಬಾತನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಮುಡಿಗುಂಡ ನಿವಾಸಿಗಳು ಬುಧವಾರ ಪ್ರತಿಭಟಿಸಿದರು.
Published on
ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿ ನಿಂದಿಸಿರುವ ಮಂಜುನಾಥ್ ಎಂಬಾತನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಮುಡಿಗುಂಡ ನಿವಾಸಿಗಳು ಬುಧವಾರ ಪ್ರತಿಭಟಿಸಿದರು.
ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಮುಂಭಾಗ ಜಮಾಯಿಸಿದ ಬಡಾವಣೆ ಯಜಮಾನರು, ಮುಖಂಡರು, ಯುವಕರು ಹಾಗೂ ಮಹಿಳೆಯರು, ಆರೋಪಿ ಮುಡಿಗುಂಡ ನಿವಾಸಿ ಮಂಜುನಾಥ್ ಎಂಬಾತನ ಮೇಲೆ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಇತ್ತೀಚೆಗೆ ಯಳಂದೂರು ತಾಲೂಕಿನ ಮಸಣಪುರ ಗ್ರಾಮದಲ್ಲಿ ಸಂವಿಧಾನ ವಿರೋಧಿ ಅನ್ಯ ಕೋಮಿಗೆ ಸೇರಿದ ಕಿಡಿಗೇಡಿಯೊಬ್ಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪೂರಕವಾಗಿ ಕೊಳ್ಳೇಗಾಲ ಟೌನ್, ಮುಡಿಗುಂಡ ಗ್ರಾಮದ ಯುವಕ ಮಂಜುನಾಥ ಎಂಬ ಕಿಡಿಗೇಡಿಯು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಫೇಸ್ ಬುಕ್ ಕಮೆಂಟ್ ಬಾಕ್ಸ್‌ನಲ್ಲಿ ಅವಹೇಳನಕಾರಿ ಬರಹವನ್ನು ಹರಿಯಬಿಟ್ಟಿದ್ದಾನೆ.
ನಮ್ಮ ದೇಶಕ್ಕೆ ಸಂವಿಧಾನ ಬರೆದಂತಹ ರಾಷ್ಟ್ರ ನಾಯಕರಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಈ ರೀತಿಯ ಅಪಮಾನ ಮಾಡುತ್ತಿರುವುದು ಹಾಗೂ ಸಮುದಾಯಗಳ ನಡುವೆ ದ್ವೇಷ ಬಿತ್ತಿ, ಗಲಭೆಗೆ ಪ್ರಚೋದಿಸುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ, ಗಡಿ ಪಾರು ಮಾಡಬೇಕೆಂದು ಆಗ್ರಹಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net