ಕೃಷ್ಣಾ ನದಿಗಿಳಿದು ಕಲ್ಲು ಹೊತ್ತು ಪ್ರತಿಭಟನೆ

ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಆಲಮಟ್ಟಿ ಜಲಾಶಯದ ಚಂದ್ರಗಿರಿ ತೀರದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ಸಹಯೋಗದಲ್ಲಿ ರೈತರು ಕೃಷ್ಣಾ ನದಿಗಿಳಿದು ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರು. ಅರವಿಂದ ಕುಲಕರ್ಣಿ, ವಿಠ್ಠಲ ಬಿರಾದಾರ, ಸೀತಪ್ಪ ಗಣಿ, ಸಾಬಣ್ಣ ಅಂಗಡಿ, ಗುರುಲಿಂಗಪ್ಪ ಪಡಸಲಗಿ, ಉಮೇಶ ವಾಲಿಕಾರ, ಶಿವಪ್ಪ ಸುಂಟ್ಯಾನ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅರವಿಂದ ಕುಲಕರ್ಣಿ ಹೇಳಿಕೆ
  • ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹ
ಆಲಮಟ್ಟಿ: ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಆಲಮಟ್ಟಿ ಜಲಾಶಯದ ಚಂದ್ರಗಿರಿ ತೀರದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ಸಹಯೋಗದಲ್ಲಿ ರೈತರು ಕೃಷ್ಣಾ ನದಿಗಿಳಿದು ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಜಲಾಶಯದಲ್ಲಿ 80 ಟಿಎಂಸಿಗೂ ಅಧಿಕ ಪ್ರಮಾಣದ ನೀರು ಸಂಗ್ರಹವಾಗಿದೆ. ಆದರೆ ಜಿಲ್ಲೆಯಲ್ಲಿ ಮಳೆಯಿಲ್ಲದೇ ರೈತರು ಬಿತ್ತಿದ ಬೆಳೆಗಳು ಬಾಡುತ್ತಿವೆ. ಬೆಳೆಗಳಿಗೆ ಅಗತ್ಯವಾದ ನೀರಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಾಲುವೆಗಳಿಗೆ ನೀರು ಹರಿಸುವ ನಿರ್ಧಾರ ವಿಳಂಬವಾಗುತ್ತಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಮಂಗಳವಾರದ ವರೆಗೆ ಗಡುವು ನೀಡಲಾಗಿದ್ದು, ಕಾಲುವೆಗಳಿಗೆ ನೀರು ಹರಿಸದಿದ್ದರೇ ಬುಧವಾರ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಅಭಿಯಂತರರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಸಿಪಿಐ ಶಿವನಗೌಡ ಗೌಡರ ಅವರು ರೈತರೊಂದಿಗೆ ಮಾತುಕತೆ ನಡೆಸಿದರು. ರೈತರ ಬೇಡಿಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ರೈತರನ್ನು ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆದರು.
ಪೀರಸಾಬ್ , ಸಾಹೇಬಗೌಡ ಹೊಸೂರ, ದಾವಲಸಾಬ , ಸಾಬಣ್ಣ ಅಂಗಡಿ, ಜುಮ್ಮಣ್ಣ ವಾಲಿಕಾರ, ಮಲ್ಲು ನಾಟೀಕಾರ, ಸಂಗಪ್ಪ ಚಲವಾದಿ, ಸಾಹೇಬಗೌಡ ಹೊಸೂರ, ಪ್ರಕಾಶ ಮುತ್ತಗಿ, ವೆಂಕಟೇಶ ವಡ್ಡರ, ಸಿದ್ದು ಗಣಿ, ಸಿದ್ದು ಹಿರೇಮಠ, ನಿಂಗಯ್ಯ ಗಣಾಚಾರಿ, ಮಲ್ಲಿಕಾರ್ಜುನ ಓಲೇಕಾರ, ಶ್ರೀಧರ ತಳವಾರ, ಮಲ್ಲು ಶಿರಬಡಗಿ, ಮುತ್ತು ಮಸಬಿನಾಳ, ಶ್ರೀಶೈಲ ದೊಡಮನಿ, ಪ್ರಕಾಶ ನವಲಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net