ಜನಗಣತಿ ತರಬೇತಿ ಬಹಿಷ್ಕರಿಸಿ ಪ್ರತಿಭಟನೆ

ಆಳಂದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಗಣತಿದಾರರ ತರಬೇತಿ ಬಹಿಷ್ಕರಿಸಿ ಅಂಗನವಾಡಿ ಕಾರ್ಯಕರ್ತೆಯರು ಮಿಂಚಿನ ಪ್ರತಿಭಟನೆ ನಡೆಸಿದರು. ರಾಜಮತಿ ಪಾಟೀಲ್​, ಶರಣಮ್ಮ ಸರಸಂಬ, ಮಲ್ಲಮ್ಮ, ಸಿದ್ದಮ್ಮ ಖಜೂರಿ ಇತರರಿದ್ದರು.
ಆಳಂದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಗಣತಿದಾರರ ತರಬೇತಿ ಬಹಿಷ್ಕರಿಸಿ ಅಂಗನವಾಡಿ ಕಾರ್ಯಕರ್ತೆಯರು ಮಿಂಚಿನ ಪ್ರತಿಭಟನೆ ನಡೆಸಿದರು. ರಾಜಮತಿ ಪಾಟೀಲ್​, ಶರಣಮ್ಮ ಸರಸಂಬ, ಮಲ್ಲಮ್ಮ, ಸಿದ್ದಮ್ಮ ಖಜೂರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾತಿಗಣತಿ ಕೆಲಸ ಮಾಡಿಸಿಕೊಂಡು ನಯಾಪೈಸೆ ನೀಡದ್ದಕ್ಕೆ ಸಿಡಿದೆದ್ದ ಅಂಗನವಾಡಿ ಕಾರ್ಯಕರ್ತೆಯರು
ಆಳಂದ: ಜನಗಣತಿ ಕಾರ್ಯಕ್ಕೆ ಸಹಕಾರ ನೀಡಬೇಕೆಂಬ ಆದೇಶ ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರು ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಗಣತಿದಾರರ ತರಬೇತಿ ಕಾರ್ಯಾಗಾರ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ತಾಲೂಕು ಅಧ್ಯಕ್ಷೆ ಪುಷ್ಪಾ ಚೇಟ್ಟಿ ಮಾತನಾಡಿ, ಜಾತಿಗಣತಿ ಸಂದರ್ಭದಲ್ಲಿ 421 ಕಾರ್ಯಕರ್ತೆಯರಿಗೆ ಆದೇಶ ನೀಡಿ ಕೆಲಸ ಮಾಡಿಸಿಕೊಂಡು ನಯಾಪೈಸೆ ಕೊಟ್ಟಿಲ್ಲ. ಈ ವಿಷಯ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್​ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗ ಮತ್ತೆ 335 ಕಾರ್ಯಕರ್ತೆಯರಿಗೆ ತರಬೇತಿಗೆ ಹಾಜರಾಗಲು ಆದೇಶಿಸಿದ್ದು, ನಾವು ಭಾಗವಹಿಸುವುದಿಲ್ಲ ಎಂದು ಕಿಡಿಕಾದರು.
ಸ್ಥಳಕ್ಕೆ ದೌಡಾಯಿಸಿದ ತಹಸೀಲ್ದಾರ್​ ಅಣ್ಣಾರಾಯ ಪಾಟೀಲ್​, ಸರ್ಕಾರದ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರೂ ಒಪ್ಪಲಿಲ್ಲ. ಸ್ವಯಂ ಜನಗಣತಿ ತರಬೇತಿಗೆ ಹಾಜರಾಗಿ ಶಿಕರು ಎಲ್ಲ ಕೆಲಸ ಮಾಡುತ್ತಾರೆ ಎಂದು ಹೇಳಿದ ಬಳಿಕ ಪ್ರತಿಭಟನೆ ಕೈಬಿಟ್ಟು ಕೆಲವರು ತರಬೇತಿ ಪಡೆಯಲು ಮುಂದಾದರೆ, ಹಲವರು ತಮ್ಮೂರಿಗೆ ವಾಪಸಾದರು. ಬಿಇಒ ವಿ.ರಂಗಸ್ವಾಮಿ ಶೆಟ್ಟಿ, ಸಿಡಿಪಿಒ ಶಂಭುಲಿಂಗ ಸ್ವಾಮಿ ಜತೆಗಿದ್ದರು.
ರಾಜಮತಿ ಪಾಟೀಲ್​, ಶರಣಮ್ಮ ಸರಸಂಬ, ಮಲ್ಲಮ್ಮ, ಸಿದ್ದಮ್ಮ ಖಜೂರಿ, ಸುನಂದಾ, ಲಲಿತಾ ತಡಕಲ್​, ಸರೋಜನಿ ಕಿಣ್ಣಿಸುಲ್ತಾನ, ಜ್ಯೋತಿ ಗೋಳಾ ಸೇರಿ 335 ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net