ಕೃಷಿ, ಗ್ರಾಮೀಣ ಕೂಲಿ ಕಾರ್ಮಿಕರಿಂದ ಪ್ರತಿಭಟನೆ

ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರು ಮದ್ದೂರಿನಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಟಿ.ಪಿ.ಅರುಣ್‌ಕುಮಾರ್, ಹುನುಮೇಶ್, ಶೋಭಾ, ಜಯಮ್ಮ, ಗಾಳಿಹೊನ್ನಯ್ಯ ಇತರರಿದ್ದರು.
ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರು ಮದ್ದೂರಿನಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಟಿ.ಪಿ.ಅರುಣ್‌ಕುಮಾರ್, ಹುನುಮೇಶ್, ಶೋಭಾ, ಜಯಮ್ಮ, ಗಾಳಿಹೊನ್ನಯ್ಯ ಇತರರಿದ್ದರು.
Published on
ಮದ್ದೂರು: ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರು ನಗರದ ತಾಲೂಕು ಪಂಚಾಯಿತಿ ಕಚೇರಿ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ಮಾಡಿದರು.
ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕ ಸಂಘ ತಾಲೂಕು ಸಮಿತಿ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ತಾಲೂಕು ಅಧ್ಯಕ್ಷ ಟಿ.ಪಿ.ಅರುಣ್‌ಕುಮಾರ್ ಮಾತನಾಡಿ, ಆ.16 ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ, ಅ.16ರಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಎರಡು ಸಭೆಗಳಾಗಿದ್ದು, ತಾಲೂಕಿನ ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಚರ್ಚಿಸಲಾಗಿತ್ತು. ಇದುವರೆಗೂ ಯಾವುದೇ ಸಮಸ್ಯೆಗಳು ಬಗೆಹರಿಯದ ಕಾರಣ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕಿನ ಬಿದರಹಳ್ಳಿ, ಕಾಡುಕೊತ್ತನಹಳ್ಳಿ, ಮಾದರಹಳ್ಳಿ, ಡಿ.ಎ.ಕೆರೆ, ಸಾದೊಳಲು, ಅಣ್ಣೂರು, ಮೆಣಸಗೆರೆ. ಟಿ.ಬಿ.ಹಳ್ಳಿ, ಎಸ್.ಐಹೊನ್ನಲಗೆರೆ, ಸಿ.ಎ.ಕೆರೆ, ಕ್ಯಾತಘಟ್ಟ, ನಗರಕೆರೆ, ಬೆಳ್ಳೂರು, ಕೂಳಗೆರೆ, ಹೆಮ್ಮನಹಳ್ಳಿ, ಆತಗೂರು, ಮರಳಿಗ, ಕೌಡ್ಲೆ ಗ್ರಾಮ ಮಂಚಾಯಿತಿಗಳಲ್ಲಿ ಏ.1 ರಿಂದ ಇಲ್ಲಿಯವರೆಗೆ 8 ತಿಂಗಳ ಅವಧಿಯಲ್ಲಿ 30-40 ದಿನಗಳು ಮಾತ್ರ ಉದ್ಯೋಗ ಖಾತ್ರಿಯಲ್ಲಿ ಕೂಲಿಕಾರರಿಗೆ ಕೆಲಸ ಸಿಕ್ಕಿದ್ದು 100 ದಿನ ತುಂಬುವವರೆಗೂ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತೀ ಕಾಮಗಾರಿಗೂ ನಂಮೂನೆ-6 ನಲ್ಲಿ ಅರ್ಜಿ ಕೊಡಿ ಎಂದು ಕೇಳುವುದನ್ನು ತಪ್ಪಿಸಬೇಕು. ಈಗಾಗಲೇ ಮೇಲೆ ತಿಳಿಸಿರುವ ಪಂಚಾಯಿತಿಗಳಲ್ಲಿ ನಾಮಫಲಕವನ್ನು ಕಾಯಕ ಬಂಧುಗಳಿಂದಲೇ ಹಾಕಿಸಿರುರವವರಿಗೆ ಇಂದೇ ಹಣ ಬಿಡುಗಡೆ ಮಾಡಬೇಕು. ಮಹಿಳಾ ಮತ್ತು ಪುರುಷ ಕಾಯಕ ಬಂಧುಗಳಿಗೆ ನೀಡುವ ಪೋತ್ಸಾಹಧನವನ್ನು ಅವರ ಖಾತೆಗೆ ಜಮ ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆಯೊಂದಿಗೆ ತಾಪಂ ಕಚೇರಿಗೆ ಆಗಮಿಸಿ ಇಒ ರಾಮಲಿಂಗಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಕಾರ್ಯದರ್ಶಿ ವೈ.ಎಸ್.ಶೋಭಾ, ಉಪಾಧ್ಯಕ್ಷೆ ಬಿದರಹಳ್ಳಿ ಜಯಮ್ಮ, ಮುಖಂಡರಾದ ಗಾಳಿಹೊನ್ನಯ್ಯ, ಪ್ರಕಾಶ್, ಶಿವರಾಜು, ಶಾಂತಮ್ಮ, ಚಂದ್ರಕಲಾ, ಈರೇಗೌಡ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net