ಜಿಲ್ಲಾ ಗೌರವಾಧ್ಯ ಶಿವಶರಣಪ್ಪ ಹಯ್ಯಾಳ, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಮತ್ತು ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ, ರೈತರಿಗೆ ಬಾಕಿ ಇರುವ ಹಣವನ್ನು ಒಂದು ವಾರದೊಳಗೆ ಪಾವತಿಸಬೇಕು. ಹಾಗೊಂದು ವೇಳೆ ರ್ನಿಲಕ್ಷವಹಿಸಿದರೆ ಜಿಲ್ಲಾಡಳಿತ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಶಂಕರ, ಜಗಶೆಟ್ಟಿ, ಸಿನಪ್ಪಗೌಡ, ಮಲ್ಕಪ್ಪ, ಚಾಂದ್ ಹುಸೇನ್, ರಾಮಚಂದ್ರ, ಭೀಮಣ್ಣಗೌಡ, ಹಣಮೇಶಗೌಡ, ದೇವಿಂದ್ರಪ್ಪ ಇತರರಿದ್ದರು.