ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎನ್.ರಾಮ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ 19ಕ್ಕೂ ಹೆಚ್ಚು ದೇವಾಲಯಗಳಿದ್ದು, ನಿಜಗಲ್ಲು ಬೆಟ್ಟದಲ್ಲಿರುವ ರಾಜರ ಕಾಲದ ಕುದುರೆಲಾಯ, ಗರಡಿಮನೆ, ಕಾವಲು ಗೋಪುರ, ರಾಣಿ ಅರಮನೆ, ನೀರಿನ ಕೊಳ ಸುತ್ತಮುತ್ತಲೂ ಪರಿಸರ ಇದೆ, ಇವುಗಳ ಸಂರಕ್ಷಣೆ ಮಾಡಿ ಪ್ರವಾಸಿ ತಾಣವನ್ನಾಗಿಸಬೇಕಾಗಿದೆ. ಡಿ.2ರಂದು ನೆಲಮಂಗಲದಿಂದ ದಾಬಸ್ಪೇಟೆ ಬಳಿಯ ಸಿದ್ದರಬೆಟ್ಟಕ್ಕೆ ಸಾವಿರಾರು ಭಕ್ತರನ್ನು ಒಳಗೊಂಡು ಹನುಮ ಜಯಂತಿ ಪ್ರಯುಕ್ತ ಬೃಹತ್ ಮಟ್ಟದ ಪಾದಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.