ಬಹುಜನರ ಆಶಯಗಳನ್ನು ಈಡೇರಿಸುವುದೇ ಭೀಮ್ ಆರ್ಮಿ ಜೈ ಭೀಮ್ ಸಂಘಟನೆಯ ಉದ್ದೇಶ ಎಂದು ಭೀಮ್ ಆರ್ಮಿ ಜೈ ಭೀಮ್ ಸಂಘಟನೆ ಅಧ್ಯಕ್ಷ ಪ್ರಸನ್ನ ಹೊಸೂರ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಭೀಮ್ ಆರ್ಮಿ ಜೈ ಭೀಮ್ ತಾಲೂಕು ಘಟಕದಿಂದ ನೂತನ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೀಮ್ ಆರ್ಮಿ ಜೈ ಭೀಮ್ ಸಂಘಟನೆ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯಗಳ ರಕ್ಷಣೆಗೆ ಸಂಘಟಿತವಾಗಿ ಕೆಲಸ ಮಾಡುವ ಅಗತ್ಯದ ಅವಶ್ಯಕತೆ ಇದೆ ಎಂದರು.
ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಡಿಕೆ ಹೊಸೂರು ಪ್ರಸನ್ನ ಅವರನ್ನು ಚನ್ನರಾಯಪಟ್ಟಣ ತಾಲೂಕು ಭೀಮ್ ಆರ್ಮಿ ಜೈ ಭೀಮ್ ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ ಜೈ ಭೀಮ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಸ್.ಎಲ್.ದೊರೆರಾಜು, ಪ್ರಚಾರ ಸಮಿತಿ ಅಧ್ಯಕ್ಷ ಬಿ.ಪಿ.ಧರ್ಮರಾಜ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಗೋವಿಂದಸ್ವಾಮಿ ಇತರರಿದ್ದರು.