ಸರ್ಕಾರಿ ಆಸ್ತಿ, ಪಾರ್ಕ್​ ಜಾಗ ರಕ್ಷಿಸಿ / NELAMANGAL

ನೆಲಮಂಗಲ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷ ಎನ್​.ಗಣೇಶ್​, ಪೌರಾಯುಕ್ತ ಗಂಗಾಧರ್​ ಇದ್ದರು.
ನೆಲಮಂಗಲ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷ ಎನ್​.ಗಣೇಶ್​, ಪೌರಾಯುಕ್ತ ಗಂಗಾಧರ್​ ಇದ್ದರು.
Published on
ನೆಲಮಂಗಲ : ಕೋಟ್ಯಂತರ ಬೆಲೆ ಬಾಳುವ ಸರ್ಕಾರಿ ಆಸ್ತಿ ಹಾಗೂ ಪಾರ್ಕ್​ ಜಾಗ ಸಂರಕ್ಷಣೆ ಮಾಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಸೂಚಿಸಿದರು.
ಬಸವನಹಳ್ಳಿಯ ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಇತ್ತೀಚೆಗೆ ಸಾರ್ವಜನಿಕರು ನಗರಸಭೆ ಅಧಿಕಾರಿಗಳ ಬಗ್ಗೆ ಸರ್ಕಾರಿ ಹಾಗೂ ಪಾರ್ಕ್​ ಜಾಗ ವಿಚಾರವಾಗಿ ದೂರು ನೀಡಿದ್ದಾರೆ. ಅಧಿಕಾರಿಗಳು ಸರ್ಕಾರದಿಂದ ತೆಗೆದುಕೊಳ್ಳುವ ಸಂಬಳಕ್ಕೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರಸ್ತುತ ನೆಲಮಂಗಲ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಅಧಿಕಾರಿಗಳು ಇದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು ಎಂದರು.
ನಗರ ಠಾಣೆ ಸಬ್​ ಇನ್​ಸ್ಪೆಕ್ಟರ್​ ನಂಜಯ್ಯ ಮಾತನಾಡಿ, ನಗರಸಭೆ ಅನುದಾನದಲ್ಲಿ ಕಳೆದ ಬಾರಿ 40 ಸಿಸಿ ಕ್ಯಾಮರಾ ಅಳವಡಿಸಿದ್ದು, ಸಾಕಷ್ಟು ಪ್ರಕರಣಗಳ ಪತ್ತೆಗೆ ಸಹಕಾರವಾಗಿತ್ತು. ಆದರೆ, ಇತ್ತೀಚೆಗೆ ಸಿಸಿ ಕ್ಯಾಮರಾಗಳು ಹಾಳಾಗಿದ್ದು, ಪುನ@ ಅಳವಡಿಸಿ ನಿರ್ವಹಿಸಬೇಕಿದೆ ಎಂದರು.
ನಗರಸಭೆ ಮಾಜಿ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯರಾದ ಶಿವಕುಮಾರ್​, ಸುನೀಲ್​ಮೂಡ್​, ಗಂಗಾಧರ್​ರಾವ್​, ಅಂಜನಮೂರ್ತಿ, ಅಂಜಿನಪ್ಪ, ಚೇತನ್​, ಭಾಗ್ಯಮ್ಮ ನರಸಿಂಹಮೂರ್ತಿ, ಲೋಲಾ ಗಂಗಾಧರ್​, ಸುಜಾತಾ ಮುನಿಯಪ್ಪ, ರಾಜಮ್ಮಪಿಳ್ಳಪ್ಪ, ಸುಧಾ ಕೃಷ್ಣಪ್ಪ, ಪುಷ್ಪಲತಾ ಮಾರೇಗೌಡ, ಹೆಚ್ಚುವರಿ ಸದಸ್ಯ ಕೃಪಾನಂದ್​, ಮುನಿರಾಜು, ಅಂಜನಮೂರ್ತಿ, ರಾಮಮೂರ್ತಿ, ಪೌರಾಯುಕ್ತ ಗಂಗಾಧರ್​, ವ್ಯವಸ್ಥಾಪಕ ಮುಮ್ತಾಜ್​, ಆರೋಗ್ಯ ನಿರೀಕ್ಷಕ ಉಮೇಶ್​, ರವಿಕುಮಾರ್​ ಇದ್ದರು.
ಕರ ವಸೂಲಿ ಜರೂರಾಗಲಿ : ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅಶಿಸ್ತು ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಜತೆಗೆ ಕಳೆದ ಬಾರಿ ಶೇ.96 ಕಂದಾಯ ಸಂಗ್ರಹ ಮಾಡಲಾಗಿತ್ತು. ಈ ಬಾರಿ ವಿಶೇಷವಾಗಿ ಅತಿಹೆಚ್ಚು ಕಂದಾಯ ಸಂಗ್ರಹ ಮಾಡುವಂತೆ ಅಧಿಕಾರಿಗಳಿಗೆ ಗುರಿ ನೀಡಲಾಗಿದ್ದು, ಮನೆಗೆ ಮನೆಗೆ ಭೇಟಿ ನೀಡಿ ಕಂದಾಯ ಪಾವತಿಸುವಂತೆ ಜನರಲ್ಲಿ ಮನವರಿಕೆ ಮಾಡುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ತಿಳಿಸಿದರು.
ಸದಸ್ಯರ ಆರೋಪ : ನಗರಸಭೆ ವ್ಯಾಪ್ತಿಯ ಅಧಿಕಾರಿಗಳು ಆಯ್ದ ವಾರ್ಡ್​ಗಳಲ್ಲಿ ನಾಮಫಲಕ ಅಳವಡಿಕೆ ಮಾಡಿದ್ದು ಬೇಸರದ ಸಂಗತಿ. ಬಹುತೇಕ ಕಡೆ ಸದಸ್ಯರ ನಾಮಫಲಕ ಆಳವಡಿಕೆ ಮಾಡದೇ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ನಾಮನಿರ್ದೇಶಿತ ಸದಸ್ಯ ಕೃಪಾನಂದ್​ ಆರೋಪ ಮಾಡಿದರು.
ಪುಂಡರ ಹಾವಳಿಗೆ ಬ್ರೇಕ್​ ಹಾಕಿ : ನಗರದಲ್ಲಿ ಇತ್ತೀಚಿಗೆ ಕಳವು ಪ್ರಕರಣ ಹೆಚ್ಚಳ, ಕೆರೆ ಅಂಗಳದಲ್ಲಿ ಗಾಂಜಾ ಸೇವನೆ ಮತ್ತು ಪುಂಡರಹಾವಳಿ ಇದೆ. ಶಿಕ್ಷಣಕ್ಕಾಗಿ ಹೊರ ರಾಜ್ಯಗಳಿಂದ ಬಂದಿರುವ ಯುವಕರು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ.ನಗರದ ವಿವಿಧೆಡೆ ಅಕ್ರಮ ಪಿಜಿ ಸೆಂಟರ್​ಗಳು ತಲೆ ಎತ್ತಿವೆ. ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಕ್ರಮಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರು ಮನವಿ ಮಾಡಿದರು.

ಚರ್ಚೆಗೊಳಪಟ್ಟ ವಿಷಯಗಳು

*2026&27ನೇ ಸಾಲಿಗೆ ಡಾಟಾ ಎಂಟ್ರಿ ಆಪರೇಟರ್​ ನೇಮಕಕ್ಕೆ ಹೊಸ ಟೆಂಡರ್​ ಕರೆಯುವುದು.
*ಹೊಸದಾಗಿ ಕೊರೆದ ಬೋರ್​ವೆಲ್​ಗೆ ವಿದ್ಯುತ್​ ಸಂಪರ್ಕ, ಟ್ರಾನ್ಸ್​ ಫಾರ್ಮರ್​ ಅಳವಡಿಕೆ.
*ನಗರಸಭೆ ಕಟ್ಟಡ ನಿರ್ಮಾಣಕ್ಕೆ 4.36ಕೋಟಿ ಅನುದಾನ ಮೀಸಲಿಡುವುದು.
*ಗೋವಿವೆಂಕಟೇಶ್ವರ ಕಲ್ಯಾಣ ಮಠ ಹಾಗೂ ಬಸವನಹಳ್ಳಿ ರಸ್ತೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಬಿನ್ನಮಂಗಲ ಪ್ರದೇಶದಲ್ಲಿ ಫುಡ್​ ಕೋರ್ಟ್​ ನಿರ್ಮಾಣ.
*ನಗರದಲ್ಲಿ ಕನ್ಸ್​ಟ್ರಕ್ಷನ್​ ಮತ್ತು ಡೆಮಾಲಿಷನ್​ ತ್ಯಾಜ್ಯ ಸಂಸ್ಕರಣ ಟಕ ನಿರ್ಮಾಣ ಸೇರಿ ಅನೇಕ ವಿಷಯಗಳು ಚರ್ಚೆಗೊಳಪಟ್ಟವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net