ಆಸ್ತಿ ವಿವಾದ; ಹಾವೇರಿಯಲ್ಲಿ ಕಲ್ಲಿನಿಂದ ಜಜ್ಜಿ ತಾಯಿ–ಮಗನ ಬರ್ಬರ ಹ*: ಆರೋಪಿಗಳ ವಿರುದ್ಧ ಪ್ರಕರಣ ದಾಖಲು | Haveri

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಕುಸನೂರು ಗ್ರಾಮದಲ್ಲಿ ಶುಕ್ರವಾರ(ಸೆ. 25) ಆಸ್ತಿ ವಿಚಾರವಾಗಿ ಉಂಟಾದ ವಿವಾದ ತಾರಕಕ್ಕೇರಿ ತಾಯಿ ಮತ್ತು ಮಗನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕಿನ ಕುಸನೂರು ಗ್ರಾಮದಲ್ಲಿ ಶುಕ್ರವಾರ(ಸೆ. 25) ಆಸ್ತಿ ವಿಚಾರವಾಗಿ ಉಂಟಾದ ವಿವಾದ ತಾರಕಕ್ಕೇರಿ ತಾಯಿ ಮತ್ತು ಮಗನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಗ್ರಾಮದ ಪ್ರೇಮಕ್ಕ ಬಡಿಗೇರ (55) ಹಾಗೂ ಅವರ ಪುತ್ರ ಅವಿನಾಶ ಬಡಿಗೇರ (38) ಹತ್ಯೆಯಾದವರು. ಇದೇ ಗ್ರಾಮದ ತಿರಕಯ್ಯ ಹೊಸಮಠ (60) ಹಾಗೂ ಬಸವರಾಜ ಹೊಸಮಠ (28) ಎಂಬುವರು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Also Read
ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದರೇ ಸ್ಪರ್ಧಿಸುವುದನ್ನು ಬಹಿಷ್ಕರಿಸಿ: ವಿಪಕ್ಷಗಳಿಗೆ ಅಭಿಜಿತ್ ದಿಪ್ಕೆ ಒತ್ತಾಯ | Abhijeet Dipke
ಸಾಂದರ್ಭಿಕ ಚಿತ್ರ

ಹಲವು ವರ್ಷಗಳ ಹಿಂದೆ ಪ್ರೇಮಕ್ಕ ಬಡಿಗೇರ ಕುಟುಂಬವು ಹೊಸಮಠ ಕುಟುಂಬದಿಂದ ಮನೆ ಹಾಗೂ ಜಾಗ ಖರೀದಿಸಿತ್ತು. ಆದರೆ ಆಸ್ತಿ ಈವರೆಗೂ ಅವರ ಹೆಸರಿಗೆ ವರ್ಗಾವಣೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರೇಮಕ್ಕ ನ್ಯಾಯಾಲಯದ ಮೊರೆ ಹೋಗಿ ಮನೆ ಹಾಗೂ ಜಾಗವನ್ನು ಮರಳಿ ತಮ್ಮ ವಶಕ್ಕೆ ಪಡೆದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು, ಇಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಆಡೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ತಿ ವಿವಾದವೇ ಹತ್ಯೆಗೆ ಕಾರಣವೇ ಎಂಬುದರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net