ಧಾರ್ಮಿಕ ಕಾರ್ಯಗಳಿಂದ ಸಾಮರಸ್ಯ ವೃದ್ಧಿ / KUNDANA

ದೇವನಹಳ್ಳಿ ತಾಲೂಕು ನರಗನಹಳ್ಳಿಯಲ್ಲಿಹಮ್ಮಿಕೊಂಡಿದ್ದ ಶ್ರೀ ಮುನೇಶ್ವರ ಸ್ವಾಮಿ ಹಾಗೂ ಸಪ್ತ ಮಾತೃಕೆ ಅಮ್ಮನ ಸ್ಥಿರಬಿಂಬ ಪ್ರತಿಷ್ಠಾಪನೆ ವಾರ್ಷಿಕೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ, ಪಂಚಾಯಿತಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚನ್ನಹಳ್ಳಿ ರಾಜಣ್ಣ, ಅಂತಾರಾಷ್ಟ್ರೀಯವಿಮಾನ ನಿಲ್ದಾಣ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್​, ನಿರ್ದೇಶಕ ಪ್ರಸನ್ನ ಕುಮಾರ್​, ತಾಲೂಕು ಅಧ್ಯಕ್ಷ ಜಗನ್ನಾಥ್​ ಇತರರು ಇದ್ದರು.

Published on

ಕುಂದಾಣ :

ನೆಮ್ಮದಿ, ಸಮೃದಿ, ಗ್ರಾಮಗಳ ಒಳಿತು ಹಾಗೂ ಮಳೆ-&ಬೆಳೆ ಚೆನ್ನಾಗಿ ಬಂದು ಗ್ರಾಮದಲ್ಲಿ ಸುಂದರ ವಾತಾವರಣ ನಿರ್ಮಾಣಕ್ಕಾಗಿ ದೈವಿಕ ಶಕ್ತಿಗಳ ಆರಾಧನೆ ಅತಿಮುಖ್ಯ. ಧಾರ್ಮಿಕ ಕಾರ್ಯ ಚಟುವಟಿಕೆಗಳಿಂದ ಜನರ ನಡುವೆ ಸಾಮರಸ್ಯ, ಏಕತೆ ಮತ್ತು ಸೌಹಾರ್ದ ಹೆಚ್ಚಿಸುತ್ತವೆ ಎಂದು ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು.

ನರಗನಹಳ್ಳಿಯಲ್ಲಿಶ್ರೀ ಮುನೇಶ್ವರ ಸ್ವಾಮಿ ಹಾಗೂ ಸಪ್ತಮಾತೃಕೆ ಅಮ್ಮನ ಸ್ಥಿರಬಿಂಬ ಪ್ರತಿಷ್ಠಾಪನೆ ಎರಡನೇ ವಾರ್ಷಿಕೋತ್ಸವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ದೇವಾಲಯ ಅಭಿವೃದ್ಧಿಹಾಗೂ ನರಗನಹಳ್ಳಿಗೆ ಮೂಲಸೌಕರ್ಯ ಕಲ್ಪಿಸಲು ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾಪ್ರಾಧಿಕಾರದ ನಿರ್ದೇಶಕ ನರಗನಹಳ್ಳಿ ನಾಗೇಶ್​ ಮಾತನಾಡಿ, ಐವಿಸಿ ರಸ್ತೆಯಿಂದ ನರಗನಹಳ್ಳಿ ಮಾರ್ಗ ಅಭಿವೃದ್ಧಿಗೆ ಸುಮಾರು 1.70 ಕೋಟಿ ರೂ. ಮತ್ತು ವಿಶೇಷಅನುದಾನ 27 ಲಕ್ಷ ರೂ. ಸೇರಿ ಒಟ್ಟು 1.97 ಕೋಟಿ ರೂ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬಿಡುಗಡೆಯಾಗಿದೆ. ಸದ್ಯದಲ್ಲೇ ಭೂಮಿ ಪೂಜೆಗೆ ಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ. ಗ್ರಾಮದಲ್ಲಿ ಹೊಸದಾಗಿ ಸಮುದಾಯ ಭವನ ನಿರ್ಮಾಣಕ್ಕೂ ಅನುದಾನ ನೀಡಿದ್ದಾರೆ ಎಂದರು. ಹಿರಿಯ ಮುಖಂಡ ಬಚ್ಚೇಗೌಡ, ನರಗನಹಳ್ಳಿ ಮುನೇಗೌಡ, ಜಗದೀಶ್​, ವಿಜಯ, ಪ್ರಕಾಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net