ಮಾನವೀಯತೆಯಿಂದ ಸೌಹಾರ್ದತೆ ವೃದ್ಧಿ

ಬೀಳಗಿ ಪಟ್ಟಣದ ಕಂಬಾರ ಗಲ್ಲಿ ಹುಸೇನಪೀರ ದೇವಸ್ಥಾನದ ಲೋಕಾರ್ಪಣೆ ಹಾಗೂ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ರುದ್ರಮುನಿ ಶಿವಾಚಾರ್ಯಗಳು, ಸೂಪಿ ಸಯ್ಯದಬಾಷಾ ಸಾಹೇಬ,ಶಿವಾನಂದ ದೇವರು ಹಾಗೂ ಗ್ರಾಮದ ಪ್ರಮುಖರು ಇದ್ದರು.
ಬೀಳಗಿ ಪಟ್ಟಣದ ಕಂಬಾರ ಗಲ್ಲಿ ಹುಸೇನಪೀರ ದೇವಸ್ಥಾನದ ಲೋಕಾರ್ಪಣೆ ಹಾಗೂ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ರುದ್ರಮುನಿ ಶಿವಾಚಾರ್ಯಗಳು, ಸೂಪಿ ಸಯ್ಯದಬಾಷಾ ಸಾಹೇಬ,ಶಿವಾನಂದ ದೇವರು ಹಾಗೂ ಗ್ರಾಮದ ಪ್ರಮುಖರು ಇದ್ದರು.
Published on
ಬೀಳಗಿ: ಜಾತಿ-ಧರ್ಮ ಭೇದಭಾವ ಮರೆತು ಮಾನವೀಯತೆ ಮೌಲ್ಯಗಳನ್ನು ಉಳಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿದೆ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಕಂಬಾರ ಗಲ್ಲಿ ಶುಕ್ರವಾರ ಹುಸೇನಪೀರ ದೇವಸ್ಥಾನದ ಲೋಕಾರ್ಪಣೆ ಹಾಗೂ ಸಮುದಾಭವನ ಉದ್ಘಾಟಿಸಿ ಮಾತನಾಡಿದ ಅವರು, ಬೀಳಗಿಯಲ್ಲಿ ಹಿಂದೂ-ಮುಸ್ಲಿಂ ಸಮಾನತೆಯಿಂದ ಹಬ್ಬಗಳನ್ನು ಆಚರಿಸುವ ಪರಂಪರೆ ಭಾವೈಕ್ಯಕ್ಕೆ ಮಾದರಿಯಾಗಿದೆ. ಯಾರಲ್ಲಿ ದೇವರ ಮೇಲೆ ನಂಬಿಕೆ, ವಿಶ್ವಾಸ ಇದೆ ಅಲ್ಲಿ ಎಲ್ಲವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಹೈದರಾಬಾದ್ ತೆಲಂಗಾಣದ ಸೂಫಿ ಸಯ್ಯದಬಾಷಾ ಸಾಹೇಬರು ಭಾವೈಕ್ಯ ಪ್ರವಚನ ನೀಡಿ, ಹಿಂದೂ-ಮುಸ್ಲಿಂ ಏಕತೆಯೇ ದೇಶದ ಅಭಿವದ್ಧಿಗೆ ಮೂಲ ಎಂದು ಅಭಿಪ್ರಾಯಪಟ್ಟರು. ಜಾತಿ ಭೇದಗಳನ್ನು ಮರೆತು ಒಗ್ಗಟ್ಟಿನಿಂದ ಬದುಕಿದರೆ ಸಮದ್ಧ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು. ಜಗಜ್ಯೋತಿ ಬಸವಣ್ಣನವರ ಹಾಕಿದ ಅನುಭವದ ಮಂಟಪಗಳ ಆದರ್ಶ ತತ್ವಗಳು ಮನುಕೂಲಕ್ಕೆ ಮಾರ್ಗದರ್ಶನವಾಗಿದ್ದು ಹಿತ ವಚನಗಳು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ ಎಂದರು.
ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಅನ್ನಪೂರ್ಣೇಶ್ವರಿ ಬಹನ್ಮಠ ಶಿವಾನಂದ ದೇವರು ಸೊಮಪ್ಪಯ್ಯನಮಠದ ಚನ್ನಬಸವ ಮಹಾಸ್ವಾಮಿಗಳು, ಹುಚ್ಚಪ್ಪಯ್ಯನಮಠದ ಸಿದ್ದಯ್ಯ ಸ್ವಾಮಿಗಳು, ಪಂಡಿತ ಮಹಮದ್ ಸುಬಾನಿ, ಶ್ರೀಶೈಲ ದಳವಾಯಿ, ಸಾಹಿರ ಬೀಳಗಿ, ಸಂಗಪ್ಪ ಅವಟಿ, ಶಂಕರ ಬುಡ್ಡರ, ಶ್ರೀಶೈಲ ಉಪ್ಪಾರ, ಗುರಪ್ಪಾ ಕುಂಬಾರ, ಗಣಪತಿ ಬುಡ್ಡರ, ಲಕ್ಷ್ಮಣ ದಳವಾಯಿ, ಸಂಗಪ್ಪ ಕಂದಗಲ್ಲ, ಸಿದ್ದಪ್ಪ ದಳವಾಯಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net