ಗುಬ್ಬಿ meeting ತಾಲೂಕಿನ ಭೋಮ್ಮರಸನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ವಿಜಿಯಣ್ಣ ಉದ್ಘಾಟಿಸಿದರು. ಉಪಾಧ್ಯಕ್ಷ ಶಿವಾನಂದಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪರಮಶಿವಯ್ಯ ಇದ್ದರು.
Published on:
Copied
Follow Us
ಎಂ.ಎನ್.ಕೋಟೆ: ಗುಬ್ಬಿ ತಾಲೂಕಿನ ಭೋಮ್ಮರಸನಹಳ್ಳಿ ಡೇರಿ meeting ಈ ವರ್ಷದಲ್ಲಿ 9 ಲಕ್ಷ ರೂ. ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ವಿಜಿಯಣ್ಣ ತಿಳಿಸಿದ್ದರು.
ಗುಬ್ಬಿ ತಾಲೂಕಿನ ಭೋಮ್ಮರಸನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸರ್ಕಾರದಿಂದ ಬರುವ ಸೌಲಭ್ಯವನ್ನು ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇನೆ. ರೈತರು ಗುಣಮಟ್ಟದ ಹಾಲನ್ನ ಹಾಕಬೇಕು, ಇದರಿಂದ ರೈತರಿಗೆ ಪ್ರೋತ್ಸಾಹ ಧನ ಪಡೆಯಲು ಸಾಧ್ಯವಾಗುತ್ತದೆ ಎಂದರು.
ತುಮಕೂರು ಹಾಲು ಒಕ್ಕೂಟದಿಂದ ರೈತರಿಗೆ ವಿಮೆ ಸೌಲಭ್ಯವನ್ನು 60ರಿಂದ 80 ಸಾವಿರದ ವರೆಗೆ ಹೆಚ್ಚಳ ಮಾಡಲಾಗುತ್ತಿದೆ. ರೈತರು ತಮ್ಮ ರಾಸುಗಳಿಗೆ ತಪ್ಪದೇ ವಿಮೆ ಸೌಲಭ್ಯ ಮಾಡಿಸಿಕೊಳ್ಳಬೇಕು. ವಿಮೆ ಮಾಡಿಸಿದರೆ ರೈತರ ಜಾನುವಾರುಗಳು ಮೃತಪಟ್ಟರೆ ಸಹಾಯಧರ ಸಿಗುತ್ತದೆ ಎಂದರು.
ವಿಸ್ತರಣಾಧಿಕಾರಿ ರಾಜು, ಮಹೇಶ್, ಸುದೀಪ್, ಸಂಘದ ಕಾರ್ಯದರ್ಶಿ ಶಿವಕುಮಾರ್ , ನಿರ್ದೇಶಕರಾದ ನಾಗರಾಜು, ಸದಾಶಿವಯ್ಯ, ಜಗದೀಶ್, ಷಣ್ಮುಖಯ್ಯ ಇದ್ದರು.