ಕಲಬುರಗಿ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 44ನೇ ಘಟಿಕೋತ್ಸವದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪಿಎಚ್.ಡಿ ಪದವಿ ಪ್ರದಾನ ಮಾಡಿದರು. ಪ್ರೊ.ಬಿರಾದಾರ್ ಅವರು "ಕೋಶೀಯ ಕಾರ್ಯನಿರ್ವಹಣೆ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಕೋಶೀಯ ನೀತಿ ಸುಧಾರಣೆಗಳ ಪರಿಣಾಮ: ಭಾರತದ ಪ್ರಮುಖ ರಾಜ್ಯಗಳ ಒಂದು ವಿಶ್ಲೇಷಣೆ' ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಧಾರವಾರಡದ ಪ್ರೊ.ನಯನತಾರಾ ಮಾರ್ಗದರ್ಶಕರಾಗಿದ್ದಾರೆ. ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಸಿಎಂಡಿಆರ್ ಧಾರವಾಡದ ನಿರ್ದೇಶಕ ಪ್ರೊ.ಬಸವಪ್ರಭು ರ್ಜಿಲಿ, ಸಂಶೋಧನಾ ಮಾರ್ಗದರ್ಶಕರಾದ ಪ್ರೊ. ನಯನತಾರ ಎಸ್. ನಾಯಕ್ ಅಭಿನಂದನೆ ಸಲ್ಲಿಸಿದ್ದಾರೆ.