ವಿದ್ಯುತ್ ವಲಯ ಖಾಸಗಿಯಾದರೆ ಸಂಕಷ್ಟ

ಅಲಂಬೂರ್ ಮುಂಟಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಟಿ.ಅರ್.ವಿದ್ಯಾಸಾಗರ್ ಉದ್ಘಾಟಿಸಿದರು. ಸಿಂಧುವಳ್ಳಿ ಸತೀಶ್, ಶಂಕರ್ ನಾಯಕ್ ಇತರರು ಇದ್ದರು.
ಅಲಂಬೂರ್ ಮುಂಟಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಟಿ.ಅರ್.ವಿದ್ಯಾಸಾಗರ್ ಉದ್ಘಾಟಿಸಿದರು. ಸಿಂಧುವಳ್ಳಿ ಸತೀಶ್, ಶಂಕರ್ ನಾಯಕ್ ಇತರರು ಇದ್ದರು.
Published on
ನಂಜನಗೂಡು: ರೈತ ಸಂಘಟನೆಗಳು ಹಾಗೂ ರೈತರು ನಡೆಸುವ ಪ್ರತಿಭಟನೆ ಸ್ಥಳಕ್ಕೆ ಆಯಾ ಜಿಲ್ಲಾ , ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ಸೂಕ್ತ ಪರಿಹಾರಗಳನ್ನು ನೀಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿರುವ ಕ್ರಮ ಸ್ವಾಗತಾರ್ಹ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಹೇಳಿದರು.

ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಆಲಂಬೂರು ಮುಂಟಿ ಗ್ರಾಮದಲ್ಲಿ ರೈತ ಸಂಘಟನೆಯ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ವಿದ್ಯುತ್ ವಲಯದ ಖಾಸಗೀಕರಣವನ್ನು ರೈತರ ಸಂಘ ವಿರೋಧಿಸುತ್ತದೆ. ಇದಕ್ಕೆ ಕಾರಣ ವಿದ್ಯುತ್ ವಲಯ ಖಾಸಗಿಯವರ ಹಿಡಿತಕ್ಕೆ ಹೋದರೆ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಸರ್ಕಾರಗಳಿಂದ ರೈತರಿಗೆ ಸಿಗುವ ನೆರವು ನಿಂತುಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ರೈತರು ಹಲವು ಸಂಕಷ್ಟಗಳ ನಡವೆ ಬದುಕು ನಡೆಸುತ್ತಿದ್ದಾರೆ. ಒಂದೊಮ್ಮೆ ವಿದ್ಯುತ್ ವಲಯ ಖಾಸಗೀಕರಣವಾದರೆ ಅನ್ನದಾತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದರು.

ರೈತ ಸಂಘಟನೆಗಳು ಮತ್ತು ರೈತರು ಯಾವಾಗಲೂ ಪ್ರಾಮಾಣಿಕವಾಗಿ ದುಡಿಯಬೇಕು. ನಾವು ಪ್ರಾಮಾಣಿಕವಾಗಿ ಇದ್ದರಷ್ಟೇ ಅಧಿಕಾರಿಗಳ ಟೇಬಲ್ ಕುಟ್ಟಿ ಅವರ ವಿರುದ್ಧ ನ್ಯಾಯ ಕೇಳಲು ಸಾಧ್ಯ. ನಾವು ಅಧಿಕಾರಿಗಳಂತೆ ಹಣದ ಹಿಂದೆ ಹೋದರೆ ರೈತರ ಪರವಾಗಿ ನ್ಯಾಯ ಕೇಳುವ ನೈತಿಕತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆ ಪ್ರಾಮಾಣಿಕ ಹೋರಾಟವನ್ನು ರೂಢಿಸಿಕೊಂಡಿದೆ ಎಂದರು.

ಗ್ರಾಮದ ರೈತ ಮುಖಂಡ ನಿಂಗರಾಜು ಮಾತನಾಡಿ, ರೈತರು ಯಾವಾಗಲೂ ಹೋರಾಟದಿಂದಲೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ರೈತನಿಗೆ ಹೋರಾಟವೇ ಬದುಕಾಗಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಗೌರವ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶವನ್ನು ಕಟ್ಟಿ ಬೆಳೆಸಬೇಕಾದ ನವ ಯುವಕರು ಗ್ರಾಮೀಣ ಭಾಗಗಳಲ್ಲಿ ಉಳಿದು ವ್ಯವಸಾಯ ಮಾಡಬೇಕಿದೆ ಎಂದರು.

ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಹಿಮ್ಮಾವು ರಘ, ಜಿಲ್ಲಾಧ್ಯಕ್ಷ ಸಿಂದುವಳ್ಳಿ ಸತೀಶ್, ಜಿಲ್ಲಾ ಉಪಾಧ್ಯಕ್ಷ ಶಂಕರ್ ನಾಯಕ್, ತಾಲೂಕು ಅಧ್ಯಕ್ಷ ಮಹದೇವ ನಾಯಕ, ಆಲಂಬೂರ್ ಮಂಟಿ ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ವಿಜಯ್ ಕುಮಾರ್, ಉಪಾಧ್ಯಕ್ಷ ಕೃಷ್ಣ, ಸಂಘಟನಾ ಕಾರ್ಯದರ್ಶಿ ನಾಗರಾಜು, ಜಂಟಿ ಕಾರ್ಯದರ್ಶಿ ಸ್ವಾಮಿ, ಕಾರ್ಯದರ್ಶಿ ಲೋಕೇಶ್, ಖಜಾಂಚಿ ಶಿವಲಿಂಗ, ಮಾಧ್ಯಮ ಕಾರ್ಯದರ್ಶಿ ಮಂಜು, ಸಹ ಕಾರ್ಯದರ್ಶಿ ರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net