ಶೇ.7ರಿಂದ 10 ಶುಲ್ಕ ಹೆಚ್ಚಳ ಅನಿವಾರ್ಯ ಎಂದ ಖಾಸಗಿ ಶಾಲೆಗಳು

ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ
ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ
Published on

ಪ್ರಮುಖ ಮುಖ್ಯಾಂಶಗಳು

  • ಖಾಸಗಿ ಶಾಲೆಗಳು ವಾರ್ಷಿಕ ಶೇ.7ರಿಂದ 10ರಷ್ಟು ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್
  • ಖಾಸಗಿ ಶಾಲೆಗಳಿಗೆ ವಿದ್ಯುತ್, ನೀರಿನ ಬಿಲ್, ವೇತನ ಹೆಚ್ಚಳ, ವಿಮೆ, ಮೂಲಸೌಕರ್ಯ ಕಲ್ಪಿಸುವುದು ಸೇರಿ ಪ್ರತಿಯೊಂದರಲ್ಲಿಯೂ ಬೆಲೆ ಹೆಚ್ಚಳವಾಗುತ್ತಿದೆ. ಈ ಕಾರಣಕ್ಕೆ ಅನಿವಾರ್ಯ
  • ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚಿನ ಅನಧಿಕೃತ ನರ್ಸರಿ ಶಾಲೆಗಳು ಹಾಗೂ ಇತರೆ ಶಾಲೆಗಳು ನಡೆಯುತ್ತಿವೆ. ಇವುಗಳ ನಡುವೆ ಅಧಿಕೃತವಾಗಿ ಶಾಲೆಗಳನ್ನು ನಡೆಸುವುದು ಕಷ್ಟಸಾಧ್ಯ
ಬೆಂಗಳೂರು: ಖಾಸಗಿ ಶಾಲೆಗಳು ವಾರ್ಷಿಕ ಶೇ.7ರಿಂದ 10ರಷ್ಟು ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾರೆ.
ಶುಲ್ಕ ವಿಚಾರವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಖಾಸಗಿ ಶಾಲೆಗಳಿಗೆ ವಿದ್ಯುತ್, ನೀರಿನ ಬಿಲ್, ವೇತನ ಹೆಚ್ಚಳ, ವಿಮೆ, ಮೂಲಸೌಕರ್ಯ ಕಲ್ಪಿಸುವುದು ಸೇರಿ ಪ್ರತಿಯೊಂದರಲ್ಲಿಯೂ ಬೆಲೆ ಹೆಚ್ಚಳವಾಗುತ್ತಿದೆ. ಈ ಕಾರಣಕ್ಕೆ ಅನಿವಾರ್ಯವಾಗಿ ಶುಲ್ಕ ಹೆಚ್ಚಳ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಶುಲ್ಕ ಹೆಚ್ಚಳ ಮಾಡುತ್ತಾರೆ. ಕೆಲವೊಬ್ಬರು ಮಾಡದಿರಬಹುದು. ಆದರೆ, ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚಿನ ಅನಧಿಕೃತ ನರ್ಸರಿ ಶಾಲೆಗಳು ಹಾಗೂ ಇತರೆ ಶಾಲೆಗಳು ನಡೆಯುತ್ತಿವೆ. ಇವುಗಳ ನಡುವೆ ಅಧಿಕೃತವಾಗಿ ಶಾಲೆಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ಈ ಕಾರಣಕ್ಕೆ ಶುಲ್ಕ ಹೆಚ್ಚಳ ಮಾಡಲೇಬೇಕಿದೆ. ಆದರೆ, ಶುಲ್ಕ ಹೆಚ್ಚಳ ಮಿತಿಯು ಗರಿಷ್ಠ ಶೇ.15 ಮೀರಬಾರದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net