ಈ ಪ್ರದರ್ಶನದಲ್ಲಿ ಒಟ್ಟು 100 ತಾಂತ್ರಿಕ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ 32, ಉತ್ಪಾದನಾ ವಿಭಾಗದಿಂದ 28, ಆಟೋಮೋಟಿವ್‌ನಿಂದ 19 ಸೇರಿದಂತೆ ಕನ್ಸ್ಟ್ರಕ್ಷನ್, ಐಟಿ ಹಾಗೂ ಇತರ ವಿಭಾಗಗಳ ಮಾದರಿಗಳು ಜನರ ಗಮನ ಸೆಳೆದವು. ಲಭ್ಯವಿರುವ ಕಡಿಮೆ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಯಾರಿಸಿದ ಈ ಪ್ರಾಜೆಕ್ಟ್‌ಗಳು ಅವರ ಪ್ರಾಯೋಗಿಕ ಜ್ಞಾನಕ್ಕೆ ಕನ್ನಡಿ ಹಿಡಿದಿದ್ದವು.