ನಿರಂತರ ಜನಮುಖಿ ಕೆಲಸಗಳಿಗೆ ಆದ್ಯತೆ

ತುಳಸಿಗೇರಿಯಲ್ಲಿ ದುರ್ಗಾದೇವಿ ದೇವಸ್ಥಾನದ ಮಹಾದ್ವಾರಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶಾಸಕ ಜೆ.ಟಿ. ಪಾಟೀಲ, ಪಾಂಡು ಪೊಲೀಸ್, ಬಿ.ಎಲ್. ನಾವಲಗಿ, ನಾಗಪ್ಪ ಸೊನ್ನದ, ನಾರಾಯಣ ಬಾಲರೆಡ್ಡಿ ಇತರರಿದ್ದರು.
ತುಳಸಿಗೇರಿಯಲ್ಲಿ ದುರ್ಗಾದೇವಿ ದೇವಸ್ಥಾನದ ಮಹಾದ್ವಾರಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶಾಸಕ ಜೆ.ಟಿ. ಪಾಟೀಲ, ಪಾಂಡು ಪೊಲೀಸ್, ಬಿ.ಎಲ್. ನಾವಲಗಿ, ನಾಗಪ್ಪ ಸೊನ್ನದ, ನಾರಾಯಣ ಬಾಲರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜೆ.ಟಿ. ಪಾಟೀಲ ಭರವಸೆ
  • ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ
ಕಲಾದಗಿ: ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಅಧಿಕಾರವಧಿಯ ಕಳೆದ ಮೂರು ವರ್ಷಗಳಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದು, ಬರುವ ಅವಧಿಯಲ್ಲಿಯೂ ಇನ್ನಷ್ಟು ಜನಮುಖಿ ಕೆಲಸಗಳು ನಡೆಯಲಿವೆ ಎಂದು ಶಾಸಕರು ಹಾಗೂ ಹಟ್ಟಿ ಮತ್ತು ಚಿನ್ನದ ಗಣಿ ನಿ., ಅಧ್ಯಕ್ಷರಾದ ಜೆ.ಟಿ. ಪಾಟೀಲ ಹೇಳಿದರು.
ಗದ್ದನಕೇರಿಯ ಬಡಾವಣೆಯೊಂದರ 3.3 ಕಿ.ಮೀ. ಕಾಂಕ್ರೀಟ್ ರಸ್ತೆಗೆ, ಸಿದ್ದರಾಮೇಶ್ವರ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಹಾಗೂ ತುಳಸಿಗೇರಿಯಲ್ಲಿ ದುರ್ಗಾದೇವಿ ದೇವಸ್ಥಾನದ ದ್ವಾರಬಾಗಿಲು ನಿರ್ಮಾಣದ ಕಾರ್ಯಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿ ಗುಣಮಟ್ಟವನ್ನು ಕಾಯ್ದುಕೊಂಡು ಉತ್ತಮ ರೀತಿಯಲ್ಲಿ ಗುತ್ತಿಗೆದಾರರು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಪಾಂಡು ಪೊಲೀಸ್, ಬಿ.ಎಲ್. ನಾವಲಗಿ, ನಾಗಪ್ಪ ಸೊನ್ನದ, ನಾರಾಯಣ ಬಾಲರೆಡ್ಡಿ, ನಾರಾಯಣ ಹಾದಿಮನಿ, ಶ್ರೀಕಾಂತ ಜೈನಾಪುರ,ಅಶೋಕ ಪಾಟೀಲ, ಹನುಮಂತ ಹೊಸಕೋಟಿ, ಪರಮಾನಂದ ಮಂಟೂರ, ಹನುಮಂತ ಮಾದರ, ಸುರೇಶ ಮಾದರ, ಮಂಜು ನಾಗನೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net