ಕಾರ್ಮಿಕರಿಗೆ ಆರೋಗ್ಯದ ಕಾಳಜಿ ಇರಲಿ

ಪಾತಪಾಳ್ಯದಲ್ಲಿ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ವೈದ್ಯಾಧಿಕಾರಿ ಡಾ. ಶಿರೀಶ್​ ಆರೋಗ್ಯ ತಪಾಸಣೆ ಮಾಡಿದರು.
ಪಾತಪಾಳ್ಯದಲ್ಲಿ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ವೈದ್ಯಾಧಿಕಾರಿ ಡಾ. ಶಿರೀಶ್​ ಆರೋಗ್ಯ ತಪಾಸಣೆ ಮಾಡಿದರು.
Published on
ಪಾತಪಾಳ್ಯ :ನಿತ್ಯ ದುಡಿಯುವ ಕಾರ್ಮಿಕರು ಆರೋಗ್ಯದ ಕಡೆ ಗಮನಹರಿಸಬೇಕು. ಕಾಲಕಾಲಕ್ಕೆ ಅಗತ್ಯ ವೈದ್ಯಕಿಯ ನೆರವು ಪಡೆಯಬೇಕು ಎಂದು ವೈದ್ಯಾಧಿಕಾರಿ ಡಾ.ಶಿರೀಸ್​ ತಿಳಿಸಿದರು.
ಪಾತಪಾಳ್ಯದಲ್ಲಿ ಶುಕ್ರವಾರ ಕರ್ನಾಟಕ ಕಟ್ಟಡ ಹಾಗೂ ಇತರ ನಿಮಾರ್ಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದೊತ್ತಡ, ಮಧುಮೇಹ ಸೇರಿ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಲಾಯಿತು. ದೈಹಿಕ ಆಯಾಸ ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷತಾ ಕ್ರಮ ಪಾಲಿಸುವ ಕುರಿತು ಕಾರ್ಮಿಕರಿಗೆ ಸಲಹೆ ನೀಡಿದರು.
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರು ಅವಲಂಬಿತರಿಗೆ ವೈದ್ಯಕಿಯ ನೆರವು, ಅಪಘಾತ ಪರಿಹಾರ, ಮಕ್ಕಳ ಶಿಕ್ಷಣ ಸಹಾಯ ಹಾಗೂ ಪಿಂಚಣಿ ಸೌಲಭ್ಯ ಲಭ್ಯವಿದೆ. ಕಾರ್ಮಿಕರು ನೋಂದಣಿ ಹಾಗೂ ಚಂದಾ ಹಣ ಪಾವತಿಸಿ ವಿವರ ಸಲ್ಲಿಸಿಸಬೇಕು. ಫಾರ್ಮಾಸಿಸ್ಟ್​ ಎಸ್​.ಉಮಾ, ಶುಶ್ರೂಷಕಿ ಹೇಮಾವತಿ, ಎಎನ್​ಎಂ ಡಿಇಒ ಗಿರಿಜಮ್ಮ, ಗಾಯತ್ರಮ್ಮ, ಚಾಲಕ ಮಂಜುನಾಥ ಇದ್ದರು.
-
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net