ಕದರೀಪುರ: ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಕೋಲಾರ ತಾಲೂಕು ಸೀತಿ ಬಿ.ಜಿ.ಎಸ್ ಪಬ್ಲಿಕ್ ಶಾಲೆಯ ನರ್ಸರಿ ಮಕ್ಕಳಿಗೆ ಮದ್ದೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳು ವೈದ್ಯರ ವೇಷಭೂಷಣ ಧರಿಸಿ ಆಸ್ಪತ್ರೆಯ ವೈದ್ಯರಿಗೆ ಶುಭಾಶಯ ಕೋರಿದರು.
ಮದ್ದೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಿ.ಎ.ವನಿತಾ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಪ್ರತಿಯೊಬ್ಬರೂ ಬೆಳಗ್ಗೆ ಬೇಗ ಎದ್ದು ಹಲ್ಲುಜ್ಜಿ ,ಮುಖ ತೊಳೆದು ನಂತರ ನೀರು, ಹಾಲು ಕುಡಿಯಬೇಕು, ನಿತ್ಯ ಸಮತೋಲಿತ ಆಹಾರ ಸೇವಿಸುವುದರ ಜತೆಗೆ ನಿಯಮಿತ ವ್ಯಾಯಾಮ, ನಿದ್ರೆ ಮಾಡಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.
ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಲು ದೈನಂದಿನ ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಅಳವಡಿಸಿಕೊಂಡು ರೋಗದ ಲಣಗಳು ಇದ್ದಲ್ಲಿ ತಪಾಸಣೆೆ ಮಾಡಿಸಿ, ಚಿಕಿತ್ಸೆ ಪಡೆದುಕೊಳ್ಳಿ ಸಲಹೆ ನೀಡಿದರು.
ಮುಖ್ಯಶಿಕ ಜಿ.ಎಸ್.ಚಂದುಕುಮಾರ್ ಮಾತನಾಡಿ, ವೈದ್ಯರು ದೇವರಿದ್ದಂತೆ ಅವರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಜವಾಬ್ದಾರಿ. ಅವರಲ್ಲಿ ಸುಳ್ಳು ಹೇಳಬಾರದು. ವಿದ್ಯಾರ್ಥಿಗಳು ಏನೇ ಕೆಲಸ ಮಾಡಿದರೂ ಕೈ ಕಾಲುಗಳು ಮುಖ ತೊಳೆಯಬೇಕು, ವಾರಕ್ಕೊಮ್ಮೆ ಉಗುರು ಕತ್ತರಿಸಬೇಕು, ಶುಭ್ರವಾಗಿರುವ ಬಟ್ಟೆ ಧರಿಸಬೇಕು. ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಎಂದು ತಿಳಿಸಿದರು.
ಶುಶ್ರೂಷಕಿಯರಾದ ವರಲಕ್ಷಿ$್ಮ, ದೃತಿ, ದೈಹಿಕ ಶಿಣ ಶಿಕ ವಿ.ಎಂ.ಆನಂದ್, ಶಿಕ ಎಂ.ಬಿ.ಮಂಜುನಾಥ್, ಲ್ಮದೇವಮ್ಮ, ಶೈಲಜಾ, ಸುಗುಣಾ, ಕೆ.ಟಿ.ಅನಂತ್ಕುಮಾರ್, ಎಂ.ಎನ್.ನರಸಿಂಹಮೂರ್ತಿ ಇದ್ದರು.