ಆರ್ಟ್ ಆಫ್ ಲಿವಿಂಗ್ 45ನೇ ವಾರ್ಷಿಕೋತ್ಸವಕ್ಕೆ ಪ್ರಧಾನಿ ಮೋದಿ ಆಗಮನ

ಆರ್ಟ್ ಆಫ್ ಲಿವಿಂಗ್ 45ನೇ ವಾರ್ಷಿಕೋತ್ಸವಕ್ಕೆ ಪ್ರಧಾನಿ ಮೋದಿ ಆಗಮನ
ಆರ್ಟ್ ಆಫ್ ಲಿವಿಂಗ್ 45ನೇ ವಾರ್ಷಿಕೋತ್ಸವಕ್ಕೆ ಪ್ರಧಾನಿ ಮೋದಿ ಆಗಮನ
Published on

ಪ್ರಮುಖ ಮುಖ್ಯಾಂಶಗಳು

  • ಆರ್ಟ್ ಆಫ್ ಲಿವಿಂಗ್ 45ನೇ ವಾರ್ಷಿಕೋತ್ಸವಕ್ಕೆ ಪ್ರಧಾನಿ ಮೋದಿ ಆಗಮನ
  • ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರ 70ನೇ ಜನ್ಮದಿನದ ಸಂಭ್ರಮ
  • ಬೃಹತ್ ಧ್ಯಾನ ಮಂದಿರ ಲೋಕಾರ್ಪಣೆ ಮಾಡಲಿರುವ ನರೇಂದ್ರ ಮೋದಿ

ಬೆಂಗಳೂರು:ಬೆಂಗಳೂರಿನ ದಿಆರ್ಟ್ ಆಫ್ ಲಿವಿಂಗ್ ಸಂಸ್ಥೆಯ45ನೇವಾರ್ಷಿಕೋತ್ಸವ ಹಾಗೂ ಸಂಸ್ಥಾಪಕ ಶ್ರೀಶ್ರೀ ರವಿಶಂಕರ ಗುರದೇವರ70ನೇಜನ್ಮದಿನೋತ್ಸವದ ಅಂಗವಾಗಿ ಭಾನುವಾರ(ಮೇ10) ನಡೆಯುವ ಐತಿಹಾಸಿಕಕಾರ್ಯಕ್ರಮದಲ್ಲಿ ಪ್ರಧಾನಿನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

ನೂತನವಾಗಿನಿರ್ಮಿಸಲಾದ ಧ್ಯಾನ ಮಂದಿರವನ್ನುಉದ್ಘಾಟಿಸಿ ಮೋದಿ ಪ್ರಧಾನ ಭಾಷಣಮಾಡಲಿದ್ದಾರೆ.ಇದೇ ವೇಳೆ ಆರ್ಟ್ಆ್ ಲಿವಿಂಗ್‌ನಿಂದ ವರ್ಷಪೂರ್ತಿದೇಶವ್ಯಾಪಿ ನಡೆಯುವ,ಮಾನಸಿಕ ಆರೋಗ್ಯ,ಗ್ರಾಮೀಣಾಭಿವೃದ್ಧಿ,ಪ್ರಕೃತಿ ಸಂರಕ್ಷಣೆಮತ್ತು ಸಾಮಾಜಿಕ ಪರಿವರ್ತನೆಯಂತಹಸೇವಾ ಯೋಜನೆಗಳಿಗೆ ಚಾಲನೆನೀಡಲಿದ್ದಾರೆ.

ಮೇ.10ರಿಂದ 25ರವರೆಗೆನಡೆಯುವ ಕಾರ್ಯಕ್ರಮಗಳಲ್ಲಿವಿಶೇಷವಾಗಿ ಶ್ರೀ ಶ್ರೀ ಗುರುದೇವರನೇತೃತ್ವದಲ್ಲಿ ಮೇ13ರಂದುಎಲ್ಲರಿಗೂ ಮುಕ್ತವಾಗಿರುವ ‘ವಿಶ್ವಶಾಂತಿಗಾಗಿ ಜಾಗತಿಕ ಧ್ಯಾನ’ನಡೆಯಲಿದೆ.

182ರಾಷ್ಟ್ರಗಳಲ್ಲಿಸಕ್ರಿಯ ಚಟುವಟಿಕೆ:

ಗುರುದೇವಶ್ರೀ ಶ್ರೀ ರವಿಶಂಕರ್ ಅವರಿಂದ1981ರಲ್ಲಿಸ್ಥಾಪಿತವಾದ ‘ದಿ ಆರ್ಟ್ ಆಫ್ಲಿವಿಂಗ್’, ಇಂದು182 ದೇಶಗಳಲ್ಲಿಸಕ್ರಿಯವಾಗಿರುವ ಜಾಗತಿಕ ಮಟ್ಟದಸ್ವಯಂಸೇವಕ ಆಧಾರಿತ ಮಾನವೀಯಮತ್ತು ಶೈಕ್ಷಣಿಕ ಸಂಸ್ಥೆಯಾಗಿಬೆಳೆದಿದೆ.ಸುದರ್ಶನಕ್ರಿಯೆಯಂತಹ ಪರಿವರ್ತನಾತ್ಮಕಉಸಿರಾಟದ ತಂತ್ರಗಳು ಹಾಗೂಕ್ಷೇಮಾಭಿವೃದ್ಧಿ ಮತ್ತು ಸುಸ್ಥಿರಅಭಿವೃದ್ಧಿ ಕ್ಷೇತ್ರಗಳಲ್ಲಿನವೀನ ಉಪಕ್ರಮಗಳ ಮೂಲಕ ಈ ಸಂಸ್ಥೆಯುನೂರು ಕೋಟಿಗೂ ಹೆಚ್ಚು ಜನರನ್ನುತಲುಪಿದೆ.

ತಿಂಗಳ ಪರ್ಯಂತ ವಿವಿಧ ಕಾರ್ಯಕ್ರಮಗಳು

* ಜಾಗತಿಕ ನಾಯಕತ್ವ ಸಂವಾದ ಮತ್ತು ಶೃಂಗಸಭೆಗಳು

* ಅಪರಿಚಿತ ದೈನಂದಿನ ವೀರರಿಗೆ ಗೌರವ

* ನೀತಿ ಮತ್ತು ವಿಷಯಾಧಾರಿತ ದುಂಡುಮೇಜಿನ ಸಭೆಗಳು

* ಕೈದಿಗಳ ಕಲ್ಯಾಣ ಮತ್ತು ನೀತಿ ಸುಧಾರಣೆ

* ಬಿಮ್‌ಸ್ಟೆಕ್ ಯುವ ನಾಯಕತ್ವ ವಿನಿಮಯ

ಪ್ರತಿಯೊಬ್ಬರ ಮುಖದಲ್ಲೂ ಮುಗುಳ್ನಗೆಯನ್ನು ಕಾಣುವುದೇ ಆರೋಗ್ಯವಂತ ಸಮಾಜದ ಲಕ್ಷಣವಾಗಿದೆ. ಕಳೆದ ನಲವತ್ತೈದು ವರ್ಷಗಳಿಂದ ನಾವು ಇದೇ ಗುರಿ ತಲಪುವತ್ತ ಕಾರ್ಯಪ್ರವೃತ್ತರಾಗಿದ್ದೇವೆ.

— ಶ್ರೀ ಶ್ರೀ ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net