ಮೂಗೂರು: ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇಗುಲದಲ್ಲಿ ಶನಿವಾರ ಪೂಜೆ ಮಾಡುವ ವೇಳೆ ಅರ್ಚಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಗ್ರಾಮ ನಿವಾಸಿ ದಿ.ಶಿರ್ವಾಚಕ ಎಂ.ಡಿ.ತಿಪುರಾಂತಯ್ಯ ಅವರ ಪುತ್ರ ಟಿ.ಶಿವಕುಮಾರ್ (48) ಶನಿವಾರ ಸಂಜೆ 4 ಗಂಟೆ ಸಮಯಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸುವಾಗಲೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಸುನೀಗಿದ್ದಾರೆ.
ಮೃತರಿಗೆ ಪತ್ನಿ ಹಾಗೂ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ಭಾನುವಾರ ನಡೆಯಿತು.
ದೇವಾಲಯ ಬಂದ್: ಅರ್ಚಕ ಶಿವಕುಮಾರ್ ಮೃತಪಟ್ಟ ಹಿನ್ನೆಲೆಯಲ್ಲಿ ಅಮ್ಮನವರ ದೇವಾಲಯದ ಬಾಗಿಲನ್ನು ಭಾನುವಾರ ಸಂಜೆ 5 ಗಂಟೆವರೆಗೆ ಮುಚ್ಚಲಾಗಿತ್ತು ಎಂದು ದೇವಾಲಯದ ಪಾರುಪತ್ತೇದಾರ ಎಂ. ಬಿ.ಸಾಗರ್ ತಿಳಿಸಿದ್ದಾರೆ.