ಬೋರ್​ವೆಲ್​ ಪರಿಕರಗಳಿಗೆ ದರ ನಿಗದಿಗೆ ಪಟ್ಟು / HOSAKOTE

ಹೊಸಕೋಟೆ ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಬೋರ್​ವೆಲ್​ ರಿಗ್​ ಮಾಲೀಕರು ಬೋರ್​ವೆಲ್​ ಕೊರೆಸಲು ದರ ಏರಿಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಮಾಲೀಕರಾದ ಚನ್ನಕೇಶವ, ಚರ್ಲಥನ್​, ಶಾಂತಕುಮಾರ್​, ಪ್ರಕಾಶ್​, ಎಸ್​.ಎಲ್​.ಆರ್​.ರಾಜ, ಷಣ್ಮುಗ, ಶಿವಣ್ಣ, ಕೃಷ್ಣಮೂರ್ತಿ ಇದ್ದರು.
ಹೊಸಕೋಟೆ ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಬೋರ್​ವೆಲ್​ ರಿಗ್​ ಮಾಲೀಕರು ಬೋರ್​ವೆಲ್​ ಕೊರೆಸಲು ದರ ಏರಿಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಮಾಲೀಕರಾದ ಚನ್ನಕೇಶವ, ಚರ್ಲಥನ್​, ಶಾಂತಕುಮಾರ್​, ಪ್ರಕಾಶ್​, ಎಸ್​.ಎಲ್​.ಆರ್​.ರಾಜ, ಷಣ್ಮುಗ, ಶಿವಣ್ಣ, ಕೃಷ್ಣಮೂರ್ತಿ ಇದ್ದರು.
Published on
ಹೊಸಕೋಟೆ : ಬೋರ್​ವೆಲ್​ ಕೊರೆಸುವ ವಸ್ತುಗಳ ಬೆಲೆ ಏರಿಕೆಯಿಂದ ಬೋರ್​ವೆಲ್​ ಮಾಲೀಕರು ತತ್ತರಿಸಿದ್ದು, ಏಜೆಂಟರು ಹಾಗೂ ಮಾಲೀಕರ ನಡುವಿನ ಜಟಾಪಟಿ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ಮಾಲೀಕರು ಬೋರ್​ವೆಲ್​ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.
ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಗ್ರಾಮೀಣ ರಿಗ್​ ಮಾಲೀಕರು ಬೋರ್​ವೆಲ್​ ಲಾರಿಗಳನ್ನು ನಿಲ್ಲಿಸಿ ಏಜೆಂಟರು ಹೊಸ ದರ ನಿಗದಿ ಮಾಡುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಪಟ್ಟು ಹಿಡಿದಿದ್ದಾರೆ. ಬೋರ್​ವೆಲ್​ ಮಾಲೀಕ ಚನ್ನಕೇಶವ ಮಾತನಾಡಿ, ಪ್ರಸ್ತುತ ಬಿಟ್​, ಆಯಿಲ್​, ಹ್ಯಾಮರ್​, ಕಾರ್ಮಿಕ ಹಾಗೂ ನಿರ್ವಹಣಾ ವೆಚ್ಚ ಶೇ.30ರಿಂದ 50 ಹೆಚ್ಚಾಗಿರುವ ಪರಿಣಾಮ ರಿಗ್​ ಮಾಲೀಕರು ಬೋರ್​ವೆಲ್​ ಲಾರಿಗಳ ನಿರ್ವಹಣೆಯೇ ಸವಾಲಿನ ಕೆಲಸವಾಗಿದೆ. ಈ ಮೊದಲು 43 ಸಾವಿರ ಇದ್ದ ಬಿಟ್​ ಕಳೆದ 15 ದಿನಗಳಲ್ಲಿ 78 ಸಾವಿರ ರೂ.ಗೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ. ಅಲ್ಲದೆ, ಎಂಜಿನ್​ ಆಯಿಲ್​, ಡೀಸೆಲ್​, ಪೈಪ್​ಗಳು ಸೇರಿ ಎಲ್ಲ ವಸ್ತುಗಳು ಏರಿಕೆ ಕಂಡಿವೆ. ಇದರಿಂದ ಮಾಲೀಕರಿಗೆ ಲಾರಿಗಳ ಸಾಲ ಕಟ್ಟುವ ಜತೆಗೆ ಚಾಲಕರಿಗೆ ಸಂಬಳ ನೀಡುವುದು ಕಷ್ಟವಾಗಿದೆ. ಬೆಲೆ ಏರಿಕೆ ಕುರಿತು ಏಜೆಂಟರೊಂದಿಗೆ ಸಭೆ ನಡೆಸಿ ನಿರ್ಧರಿಸುವುದಾಗಿ ಭರವಸೆ ನೀಡಿದರು.
ಯುದ್ಧದಿಂದ ದರ ಏರಿಕೆ: ಬೋರ್​ವೆಲ್​ ಮಾಲೀಕ ಚರ್ಲಥನ್​ ಮಾತನಾಡಿ, ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರಣ ಪೆಟ್ರೋಲ್​, ಡೀಸೆಲ್​ ದರ ಕೂಡ ಏರಿಕೆಯಾಗಿದ್ದು, ಪೆಟ್ರೋಲ್​ ಬಂಕ್​ಗಳಲ್ಲಿ ನಿತ್ಯ ಲಾರಿಗಳಿಗೆ 25 ಸಾವಿರ ರೂ. ಗೆ ಮಾತ್ರ ಡೀಸೆಲ್​ ನೀಡುತ್ತಿದ್ದಾರೆ ಎಂದರು. ಕಳೆದ ಮೂರು ತಿಂಗಳ ಹಿಂದೆ ಪ್ರತಿಭಟನೆ ಮಾಡಿ 1 ಸಾವಿರ ಅಡಿಗೆ 1.40ಲಕ್ಷ ರೂ.ಇದ್ದ ದರವನ್ನು 1.60 ಲಕ್ಷ ರೂ.ಗೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬಿಡಿ ಭಾಗಗಳು ಏರಿಕೆಯಾಗಿವೆ. ಇದರೊಂದಿಗೆ ಗ್ಯಾಸ್​ ಅಭಾವದಿಂದ ಹೆಚ್ಚಿನ ಹಣ ನಿಡಿ ಗ್ಯಾಸ್​ ಸಿಲಿಂಡರ್​ ಖರೀದಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬೋರ್​ವೆಲ್​ ಕೊರೆಸಲು ಹೊಸ ದರ ನಿಗದಿ ಮಾಡಬೇಕಿದೆ ಎಂಡು ಒತ್ತಾಯಿಸಿದರು.
ಕಾರ್ಬೆಡ್​ ರಫ್ತಿಲ್ಲ: ಬೋರ್​ವೆಲ್​ ಕೊರೆಯಲು ಪ್ರಮುಖವಾಗಿ ಬೇಕಾಗಿರುವ ಬಿಟ್​ ತಯಾರಿಕೆಗೆ ಬಳಕೆ ಮಾಡುವ ಕಾರ್ಬೆಡ್​ಅನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೇ ಕಾರ್ಬನ್​ ವಸ್ತುವನ್ನು ಎಲೆಕ್ಟ್ರಿಕ್​ ಸ್ಕೂಟರ್​ಗಳ ಬ್ಯಾಟರಿಗೆ ಸಿದ್ಧಪಡಿಸಲು ಬಳಸುವುದರಿಂದ ಕಾರ್ಬೆಡ್​ ಬೇಡಿಕೆ ಸಾಕಷ್ಟು ಹೆಚ್ಚಾಗಿದ್ದು, ಇದರಿಂದ ಚೀನಾದಿಂದ ಸಮರ್ಪಕವಾಗಿ ಕಾರ್ಬೆಡ್​ ವಸ್ತು ಲಭ್ಯವಾಗುತ್ತಿಲ್ಲ. ಆದ್ದರಿಂದ ಬಿಟ್​ನ ದರ 53 ಸಾವಿರದಿಂದ 78 ಸಾವಿರ ರೂ.ಗೆ ಏರಿಕೆಯಾಗಿದೆ ಎಂದು ಬೋರ್​ವೆಲ್​ ಮಾಲೀಕ ಚರ್ಲಥನ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net