ಸಂತ್ರಸ್ತ ಮಹಿಳೆಯು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಈ ಸಂದರ್ಭದಲ್ಲಿ ಗ್ರಾಹಕರೊಬ್ಬರ ಕಾರಣದಿಂದ ಕಂಪನಿಗೆ ಲಾಂತರ ರೂಪಾಯಿ ನಷ್ಟ ಉಂಟಾಗಿತ್ತು. ಇದಕ್ಕೆ ಸಂತ್ರಸ್ತೆಯೇ ಕಾರಣ ಎಂದು ಆರೋಪಿಸಿದ್ದ ಕಂಪನಿಯ ಮಾಲೀಕ, ಆಕೆಗೆ ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದನು. ಆನಂತರ ಈ ವಿಷಯದ ಬಗ್ಗೆ ಮಾತನಾಡಲು ಕರೆದು, ಆಕೆಗೆ ಪ್ರಜ್ಞೆ ತಪ್ಪಿಸುವ ಪಾನೀಯ ಕುಡಿಸಿ, ಖಾಸಗಿ ಹೊಟೇಲ್ನಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅಲ್ಲದೆ, ಆ ದೃಶ್ಯಗಳನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದ. ಇದನ್ನು ತೋರಿಸಿ ಹಲವು ಬಾರಿ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ರೋಸಿ ಹೋಗಿದ್ದ ಸಂತ್ರಸ್ತೆ ಕಂಪನಿ ತೊರೆದಿದ್ದರು. ಇದಾದ ನಂತರ ಮಾಲೀಕನ ಪತ್ನಿ ಆ ವಿಡಿಯೋಗಳನ್ನು ಸಂತ್ರಸ್ತೆಯ ಪತಿ ಮತ್ತು ಸಹೋದರನಿಗೆ ವಾಟ್ಸಾಪ್ ಮಾಡಿದ್ದರು. ಇದರಿಂದ ಸಂತ್ರಸ್ತೆಯ ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.