ಮಾನವ ಕಳ್ಳಸಾಗಣೆ ತಡೆಯುವುದು ಅನಿವಾರ್ಯ

ಆಳಂದನಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ವಿಜಯಕುಮಾರ ಜೆಟ್ಲಾ ಮಾತನಾಡಿದರು. ಸುಮನಾ ಚಿತ್ತರಗಿ, ಕಮಲಾಕರ ರಾಠೋಡ್​, ಪ್ರವಿಣಕುಮಾರ, ಇಸ್ಮಾಯಿಲ್​ ಪಟೇಲ್​, ಜ್ಯೋತಿ ಬಂದಿ ಇತರರಿದ್ದರು.
ಆಳಂದನಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ವಿಜಯಕುಮಾರ ಜೆಟ್ಲಾ ಮಾತನಾಡಿದರು. ಸುಮನಾ ಚಿತ್ತರಗಿ, ಕಮಲಾಕರ ರಾಠೋಡ್​, ಪ್ರವಿಣಕುಮಾರ, ಇಸ್ಮಾಯಿಲ್​ ಪಟೇಲ್​, ಜ್ಯೋತಿ ಬಂದಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ವಿಜಯಕುಮಾರ ಅಭಿಮತ
  • ಆಳಂದ ಕೋರ್ಟ್​ ಆವರಣದಲ್ಲಿ ಕಾರ್ಯಕ್ರಮ
ಆಳಂದ: ಮಾನವ ಕಳ್ಳ ಸಾಗಣೆ ಅಪರಾಧ ಕೃತ್ಯವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಎಂದು ಜೆಎಂಎ್​ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ವಿಜಯಕುಮಾರ ಎಸ್​. ಜೆಟ್ಲಾ ಹೇಳಿದರು.
ಜೆಎಂಎಫ್​ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಕಾರ್ಯನಿರತ ಪತ್ರಕರ್ತರ ಸಂದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ವಿರೋಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವ ಕಳ್ಳ ಸಾಗಣೆ ಶಿಾರ್ಹ ಅಪರಾಧವಾಗಿದೆ. ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಈ ಪಿಡುಗನ್ನು ಸ್ಥಳಿಯ ಮಟ್ಟದಲ್ಲಿ ತಡೆಯುವುದು ಅನಿವಾರ್ಯ ಎಂದರು ಹೇಳಿದರು.
ಪ್ರಧಾನ ಸಿವಿಲ್​ ನ್ಯಾಯಾಧೀಶೆ ಸುಮನಾ ಚಿತ್ತರಗಿ ಮಾತನಾಡಿ, ಜಾಗತಿಕ ಹಕ್ಕುಗಳ ಪರಿಪಾಲನೆ ಕಾಯ್ದೆಗಳ ಬೆಳವಣಿಗೆ ಆಗಬೇಕು. ಮಾನವ ಕಳ್ಳ ಸಾಗಣೆ ಎದುರಿಸಲು ಜನಸಾಮಾನ್ಯರು ಜಾಗೃತರಾಗಿ ಸಕ್ರಿಯರಾಗಿ ಪರಿಹಾರ ಹುಡುಕಬೇಕು. ನಮ್ಮ ದೇಶ ಬಹಳ ಶ್ರೀಮಂತ ಸಂಸತಿ ಹೊಂದಿದ್ದು, ಆದರೂ ನಾವೆಲ್ಲ ಪಾಶ್ಚಾತ್ಯ ಜೀವನಶೈಲಿಗೆ ಮರುಳಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾಯವಾದಿಗಳ ಸಂದ ತಾಲೂಕು ಅಧ್ಯ ಕಮಲಾಕರ ರಾಠೋಡ್​ ಅಧ್ಯತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ಪ್ರವಿಣಕುಮಾರ, ಸಹಾಯಕ ಸರ್ಕಾರಿ ಅಭಿಯೋಜಕ ಇಸ್ಮಾಯಿಲ್​ ಪಟೇಲ್​, ಜ್ಯೋತಿ ಬಂದಿ, ಬಲಭೀಮ ಶಿಂಧೆ, ದೇವಾನಂದ ಹೋದಲೂರಕರ್​ ಇತರರಿದ್ದರು. ಸುಧೀರ ಪಡಶೆಟ್ಟಿ ನಿರೂಪಣೆ ಮಾಡಿದರು. ಕಲ್ಯಾಣರಾವ ಶೇರಿಕಾರ್​ ವಂದನಾರ್ಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net