ಲಾರ್ವಾ ಉತ್ಪತ್ತಿಯಾಗದಂತೆ ನೋಡಿಕೊಳ್ಳಿ

ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಡೆಂೆ ದಿನ ಜಾಗೃತಿ ಜಾಥಾಕ್ಕೆ ಡಾ. ರುದ್ರಗೌಡ ಪಾಟೀಲ ಚಾಲನೆ ನೀಡಿದರು. ವೈದ್ಯರಾದ  ಅಮೀನ್, ರುದ್ರಮುನಿ, ಶ್ರೀನಿಧಿ, ಪ್ರಗತಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ, ಸಾಂಕ್ರಾಮಿಕ ರೋಗ ತಜ್ಞ ಅಶೋಕ ಮಡ್ಡಿಕರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ Dengue ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ
ಲಿಂಗಸುಗೂರು: Dengue ಜ್ವರ ಸೋಂಕಿತ ಈಡೀಸ್ ಸೊಳ್ಳೆಗಳ ಕಡಿತದಿಂದ ಹರಡುವ ವೈರಲ್ ಕಾಯಿಲೆಯಾಗಿದ್ದು, ತೀವ್ರ ಜ್ವರ, ತಲೆನೋವು, ಕೀಲು, ಸ್ನಾಯುಗಳ ನೋವು ಪ್ರಮುಖ ಲಕ್ಷಣಗಳಾಗಿವೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಪಾಟೀಲ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ Dengue ದಿನ ಅಂಗವಾಗಿ ಆಯೋಜಿಸಿದ್ದ Dengue ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. 
ಪರೀಕ್ಷಿಸಿ, ಸ್ವಚ್ಛಗೊಳಿಸಿ, ಮುಚ್ಚಿ, Dengue ಸೋಲಿಸಲು ಕ್ರಮಗಳು ಎಂಬ ಧ್ಯೇಯ ವಾಕ್ಯದೊಂದಿಗೆ ಈ ಸಲ ಜಾಗೃತಿ ಮೂಡಿಸಲಾಗುತ್ತಿದೆ. ಮನೆಯ ಒಳಗೆ, ಹೊರಗೆ ಪರಿಕರಗಳನ್ನು ಸ್ವಚ್ಛತೆ ಕಾಪಾಡಿಕೊಂಡು, ಲಾರ್ವಾ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು ಎಂದರು. 
ವೈದ್ಯರಾದ  ನೀಲಾಂಬಿಕೆ, ಚಂದ್ರಕಲಾ, ಶಾಂತಮ್ಮ, ವಾಸೀಂ ರೆಹಮಾನ್, ಅಮರೇಶ, ಇಲಿಯಾಸ್, ರಾಜಶೇಖರ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net