ಟ್ರಸ್ಟ್ ಅಧ್ಯಕ್ಷ ಸಂತೋಷ ಡಾಗೆ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಿವರಾಜ್ ಮೇತ್ರಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಂಜುಕುಮಾರ ಪಾಟೀಲ್, ಪ್ರಮುಖರಾದ ದೇವೇಂದ್ರಪ್ಪ ಪೋಲಾ, ವೀರಣ್ಣ ಪೂಜಾರಿ, ರೇವಣಸಿದ್ದಪ್ಪ ಪೊಲೀಸ್ ಪಾಟೀಲ್, ಬಸವರಾಜ್ ಮಾಲಿ ಬಿರಾದಾರ್, ಸಿದ್ದಯ್ಯ ಸ್ವಾಮಿ, ಭೀಮಶ ಕೋರಿ, ಮಾಜಿ ಸೈನಿಕ ಪರಮೇಶ್ವರ ಡಾಗೆ ಇತರರಿದ್ದರು. ಲಕ್ಷ್ಮಣ ಕಾಂಬಳೆ ಸ್ವಾಗತಿಸಿದರು. ನಾಗೇಶ್ ಹೇರೂರು ನಿರೂಪಣೆ ಮಾಡಿದರು. ಕಲಾವಿದರಾದ ಮಂಜುನಾಥ ಜಲಸಂಗಿ, ಅಂಜನಾಭಾಯಿ, ರಾಮಚಂದ್ರ ಪರಶುರಾಮಜಿ ಹಾಗೂ ಸಿದ್ದಲಿಂಗ ಅವರ ಭಜನಾ ತಂಡ ಪ್ರಸ್ತುತಪಡಿಸಿದ ಜಾನಪದ ಹಾಗೂ ಭಜನಾ ಹಾಡುಗಳು ಗಮನ ಸೆಳೆದವು.