ನೀಟ್​ ಮರು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ

ಯಾದಗಿರಿ ಡಿಸಿ ಕಚೇರಿಯಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ ಮಾತನಾಡಿದರು. ಹೆಚ್ಚುವರಿ ಎಸ್​ಪಿ ಧರಣೇಶ, ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ಪಂಡಿತರಾವ ಪವಾರ ಇತರರಿದ್ದರು.
ಯಾದಗಿರಿ ಡಿಸಿ ಕಚೇರಿಯಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ ಮಾತನಾಡಿದರು. ಹೆಚ್ಚುವರಿ ಎಸ್​ಪಿ ಧರಣೇಶ, ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ಪಂಡಿತರಾವ ಪವಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಡಿಸಿ ಪಾಂಡ್ವೆ ಸೂಚನೆ
  • > ಯಾದಗಿರಿಯಲ್ಲಿ ಪೂರ್ವಭಾವಿ ಸಭೆ
ಯಾದಗಿರಿ: ನೀಟ್​ ಮರು ಪರೀಕ್ಷೆ ಜೂ.21ರಂದು ನಡೆಯಲಿದ್ದು, ಈ ಪರೀಕ್ಷೆ ನಕಲು ಮುಕ್ತ, ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಕುರಿತು ಡಿಸಿ ಕಚೇರಿಯಲ್ಲಿ ಗುರುವಾರ ಕರೆದಿದ್ದ ನೀಟ್​ ಪರೀೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಆರು ಪರೀಾ ಕೇಂದ್ರಗಳಲ್ಲಿ ನಡೆಯುವ ಪರೀೆಗೆ ಒಟ್ಟು 2067 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಈ ಪರೀೆಗಾಗಿ ಒಟ್ಟು 174 ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿಯೊಂದು ಪರೀಾ ಕೇಂದ್ರದಲ್ಲಿ ತಲಾ ಒಬ್ಬರಂತೆ ಪರೀಾ ಕೇಂದ್ರದ ವೀಕರನ್ನಾಗಿ ರಾಷ್ಟ್ರೀಯ ಪರೀಾ ಸಂಸ್ಥೆಯಿಂದ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ಪರೀಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಇಬ್ಬರು ಮೇಲ್ವಿಚಾರಕರು ಇರಲಿದ್ದಾರೆ. ಪರೀೆ ಅಭ್ಯರ್ಥಿಗಳ ತಪಾಸಣೆಗೆ ಎನ್​ಟಿಎದಿಂದ ತಪಾಸಣಾ ಸಾಮಗ್ರಿ ಹಾಗೂ ಅಗತ್ಯ ಸಿಬ್ಬಂದಿ ಒದಗಿಸಿದೆ. ಸಂಬಂಧಿಸಿದ ಅಧಿಕಾರಿಗಳು ನಿಯಮಗಳಂತೆ ಯಾವುದೇ ಲೋಪವಾಗದಂತೆ ಪರೀೆ ನಡೆಸಬೇಕು. ಪರೀಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ನಕಲು ಅಥವಾ ಸಾಮೂಹಿಕ ನಕಲು ಕಂಡು ಬಂದಲ್ಲಿ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾರ್ಗ ಸೂಚಿಯಂತೆ ಪರೀೆ ಸಿಸಿಟಿವಿ ಕಣ್ಗಾವಲುನಲ್ಲಿ ನಡೆಸಲಾಗುತ್ತಿದ್ದು, ಸಿಸಿ ಟಿವಿ ಕಾರ್ಯನಿರ್ವಹಣೆ ಬಗ್ಗೆ ಮುಂಚಿತವಾಗಿ ಖಾತ್ರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ವೈದ್ಯಕಿಯ ಚಿಕಿತ್ಸೆಗಾಗಿ ತುರ್ತು ಚಿಕಿತ್ಸಾ ಆಂಬುಲೆನ್ಸ್​ ಸಿದ್ಧವಾಗಿಟ್ಟುಕೊಳ್ಳಬೇಕು. ಈ ಬಾರಿ ಪರೀಕ್ಷೆ ಬಿಗುವಿನಿಂದ ನಡೆಸಲಾಗುತ್ತಿದ್ದು, ಪೋಲಿಸ್​ ಉಪ ಅಧೀಕರು&1, ಸಿಪಿಐ&1, ಪೋಲಿಸ್​ ಸಬ್​ ಇನ್ಸ$್ಪಕ್ಟರ್​&6, ಸಹಾಯಕ ಸಬ್​ ಇನ್ಸೆ$್ಪಕ್ಟರ್​ &2 ಹಾಗೂ 10& ಮುಖ್ಯ ಪೇದೆಗಳು, 12 ಮಹಿಳಾ ಪೇದೆ ಸೇರಿ ಒಟ್ಟು 48 ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ಕೇಂದ್ರ ಸೈನಿಕ ದಳದ ತಲಾ ಇಬ್ಬರು ಯೋಧರನ್ನು ಸಹ ನೇಮಿಸಲಾಗುತ್ತಿದೆ. ಪರೀಾ ಕಾರ್ಯಗಳ ಮೇಲ್ವಿಚಾರಣೆಗೆ ನೋಡಲ್​ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರೀೆ ಸಂದರ್ಭದಲ್ಲಿ ಸೂಕ್ತ ಬಸ್​ ವ್ಯವಸ್ಥೆ ಹಾಗೂ ಪರೀಾ ಕೇಂದ್ರಗಳಿಗೆ ವಿದ್ಯುತ್​ ಅಡಚಣೆಯಾಗದಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಹೆಚ್ಚುವರಿ ಎಸ್​ಪಿ ಧರಣೇಶ, ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ಪಂಡಿತರಾವ ಪವಾರ ಇತರರಿದ್ದರು.
ನಗರ ಸಂಯೋಜಕರಾಗಿ ಕೌಲಗಿ ನಿಯೋಜನೆ
ನಿಗದಿತ ಪರೀಾ ಸಮಯ ಪರಿಪಾಲನೆ ಮಾಡಬೇಕು. ಮಧ್ಯಾಹ್ನ 2 ರಿಂದ ಸಂಜೆ 5&15 ಗಂಟೆಯವರೆಗೆ ಪರೀೆ ನಡೆಯಲಿದ್ದು, ವಿಶೇಷ ಚೇತನರಿಗೆ ಹೆಚ್ಚುವರಿ ಒಂದು ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಅದರಂತೆ ಈ ಬಾರಿಯ ಪರೀೆಯಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶ ಸಹ ನೀಡಲಾಗುತ್ತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು. ಅಧಿಕಾರಿಗಳು ಜವಾಬ್ದಾರಿಯುತವಾಗಿ ಹಾಗೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿ ಪರೀೆ ಗೆ ನಗರ ಸಂಯೋಜಕರಾಗಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಅವರನ್ನು ನಿಯೋಜಿಸಿದ್ದು, ಪರೀೆಗೆ ನಿಯೋಜಿತಗೊಂಡವರು, ಇವರಿಂದ ಹೆಚ್ಚಿನ ಮಾಹಿತಿ ಪಡೆಯಲು ಅವರು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net