ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಿ

ಬಸವಕಲ್ಯಾಣದ ಎಸ್​ಎಸ್​ಕೆ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸೂರ್ಯಕಾಂತ ಶೀಲವಂತ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್​, ಭಾಗ್ಯಶ್ರೀ ಢೋಲೆ, ಡಾ.ಸುರೇಶ ಎಚ್​.ಆರ್​., ಡಾ.ವಿಜಯಕುಮಾರ, ಕಲ್ಯಾಣಪ್ಪ ನಾವದಗಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಸಲಹೆ
  • ಎಸ್​ಎಸ್​ಕೆಬಿ ಕಾಲೇಜಿನಲ್ಲಿ ಕಾರ್ಯಕ್ರಮ
ಬಸವಕಲ್ಯಾಣ: ಜ್ಞಾನದ ಜತೆಗೆ ಕೌಶಲ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ಪುಣ್ಯಕೋಟಿ ಕಾಲೇಜು ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಹೇಳಿದರು.
ನಗರದ ಎಸ್​ಎಸ್​ಕೆ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಮಂಗಲವಾರ ಆಯೋಜಿಸಿದ್ದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಯವುದೇ ಸಾಧನೆ ಮಾಡಲು ಆರೋಗ್ಯ ಮುಖ್ಯ. ಉತ್ತಮ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್​ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಲ್ಲರಿಗೂ ಸಮಾನವಗಿ ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಾಧಿಸುವ ಮನಸ್ಸು, ಇದಕ್ಕೆ ಪೂರಕವಾದ ಕಠಿಣ ಪರಿಶ್ರಮ ಬೇಕು ಎಂದು ಹೇಳಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಭಾಗ್ಯಶ್ರೀ ಢೋಲೆ ಪ್ರಾಸ್ತಾವಿಕ ಮಾತನಾಡಿದರು. ಎನ್​ಎಸ್​ಎಸ್​ ಅಧಿಕಾರಿ ಡಾ.ಸುರೇಶ ಎಚ್​.ಆರ್​., ಐಕ್ಯೂಎಸಿ ಸಂಯೋಜಕ ಡಾ.ವಿಜಯಕುಮಾರ, ಕಲ್ಯಾಣಪ್ಪ ನಾವದಗಿ, ಶರಣು ಮಠಪತಿ, ನಾಗರಾಜ, ಶಶಿಧರ, ಸುಮನ ರಡ್ಡಿ,  ಅಶ್ವಿನಿ ಜಲಾದೆ, ಪೂಜಾ.ಎನ್​, ಶಿಲ್ಪಾ ಬಿರಾದಾರ, ನಾಗಮ್ಮ ಇದ್ದರು. ಪ್ರಿಯದರ್ಶಿನಿ ಸ್ವಾಗತಿಸಿದರು. ಭಾಗ್ಯಶ್ರೀ ವಂದಿಸಿದರು. ಶಂಕರ ಹಾಗೂ ವಿಜಯಲ್ಮ ನಿರೂಪಣೆ ಮಾಡಿದರು. ವಿಜಯಲ್ಮ ಪ್ರಾರ್ಥನಾ ಗೀತೆ ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net