ಬೆಳೆ ಹಾನಿಯ ನಿಖರ ವರದಿ ಸಿದ್ಧಪಡಿಸಿ

ಹುಮನಾಬಾದ್​ ತಾಲೂಕಿನ ಮುಗನೂರ ಗ್ರಾಮದ ರೈತರ ಜಮೀನಿಗೆ ಭಾನುವಾರ ಅಧಿಕಾರಿಗಳ ತಂಡದೊಂದಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಭೇಟಿ ನೀಡಿ ಬೆಳೆಗಳ ಸ್ಥಿತಿ ಪರಿಶೀಲಿಸಿದರು. ತಹಸೀಲ್ದಾರ್​ ಜಗದೀಶ ಚೌರ್​, ಕೃಷಿ ಎಡಿ ಶರಣಕುಮಾರ ಕಲ್ಯಾಣಿ, ಬಸವರಾಜ ಆರ್ಯ ಇತರರಿದ್ದರು.
ಹುಮನಾಬಾದ್​ ತಾಲೂಕಿನ ಮುಗನೂರ ಗ್ರಾಮದ ರೈತರ ಜಮೀನಿಗೆ ಭಾನುವಾರ ಅಧಿಕಾರಿಗಳ ತಂಡದೊಂದಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಭೇಟಿ ನೀಡಿ ಬೆಳೆಗಳ ಸ್ಥಿತಿ ಪರಿಶೀಲಿಸಿದರು. ತಹಸೀಲ್ದಾರ್​ ಜಗದೀಶ ಚೌರ್​, ಕೃಷಿ ಎಡಿ ಶರಣಕುಮಾರ ಕಲ್ಯಾಣಿ, ಬಸವರಾಜ ಆರ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಸೂಚನೆ
  • ಮುಗನೂರ ರೈತರ ಜಮೀನಿಗೆ ಭೇಟಿ
ಹುಮನಾಬಾದ್​: ಬರ ಮತ್ತು ಮಳೆಯ ಕೊರತೆಯಿಂದ ಬೆಳೆ ಹಾನಿಯ ಕುರಿತು ನಿಖರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಸೂಚಿಸಿದರು.
ತಾಲೂಕಿನ ಮುಗನೂರ ಮತ್ತು ನಮದಾಪುರ ಗ್ರಾಮಗಳ ರೈತರ ಜಮೀನುಗಳಿಗೆ ಭಾನುವಾರ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಭೇಟಿ ನೀಡಿ ಹೆಸರು, ಉದ್ದು, ತೊಗರಿ ಮತ್ತು ಸೋಯಾಬಿನ್​ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು.
ಬರ ಮತ್ತು ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿರುವ ಬಗ್ಗೆ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿದರು. ರೈತರಿಗೆ ಸರ್ಕಾರದ ಸೌಲಭ್ಯಗಳು ತ್ವರಿತವಾಗಿ ದೊರೆಯಬೇಕು. ಬೆಳೆ ಹಾನಿಯ ಪ್ರಮಾಣವನ್ನು ಪಾರದರ್ಶಕವಾಗಿ ದಾಖಲಿಸಿ ಪರಿಹಾರ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ರ್ನಿಲಕ್ಷ$್ಯವಹಿಸಬಾರದು ಎಂದು ನಿರ್ದೇಶನ ನೀಡಿದರು.
ತಹಸೀಲ್ದಾರ್​ ಜಗದೀಶ ಚೌರ್​, ಕೃಷಿ ಸಹಾಯಕ ನಿರ್ದೇಶಕ ಶರಣಕುಮಾರ ಕಲ್ಯಾಣಿ, ತೋಟಗಾರಿಕೆ ಸಹಾಯಕ ಪ್ರಭಾರಿ ನಿರ್ದೇಶಕ ಜಸ್ಟಿನ್​, ಪಕ್ಷದ ಮುಖಂಡರಾದ ಬಸವರಾಜ ಆರ್ಯ, ಮಲ್ಲಿಕಾರ್ಜುನ ಸಿಗಿ, ಗೋಪಾಲಕೃಷ್ಣ ಮೋಹಳೆ, ಶಿವರಾಜ ರಾಜೋಳೆ, ವಿನಾಯಕ, ಅರುಣಕುಮಾರ ಮಾಶೆಟ್ಟಿ, ಪ್ರಕಾಶ ಮುಗನೂರ, ನಾಗೇಶ ಮದಕಟ್ಟಿ, ವಿದ್ಯಾಸಾಗರ ಡಾಕುಳಗಿ, ಪ್ರಕಾಶ ಮಾಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net