ಯಾದಗಿರಿ ನಗರ ಹಸಿರುಕರಣಕ್ಕೆ ಸಿದ್ಧತೆ

ಯಾದಗಿರಿ -ಹೈದರಾಬಾದ್ ರಸ್ತೆಯ ಚಿರಂಜೀವಿ ಶಾಲೆಯ ಮುಖ್ಯ ರಸ್ತೆಯ ಡಿವೈಡರ್‌ನಲ್ಲಿ ಸಸಿ ನೆಡುವುದಕ್ಕಾಗಿ ಗುಂಡಿ ತೊಡಿರುವುದು.
ಯಾದಗಿರಿ -ಹೈದರಾಬಾದ್ ರಸ್ತೆಯ ಚಿರಂಜೀವಿ ಶಾಲೆಯ ಮುಖ್ಯ ರಸ್ತೆಯ ಡಿವೈಡರ್‌ನಲ್ಲಿ ಸಸಿ ನೆಡುವುದಕ್ಕಾಗಿ ಗುಂಡಿ ತೊಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ವಿವಿಧ ತಳಿಯ ೯೦೦ ಸಸಿ ನೆಡುವ ಕಾರ್ಯ ಆರಂಭ
  • ಹಾನಿಕಾರ ದುಬೈ ಗಿಡ-ಮರ ತೆರವು
ಯಾದಗಿರಿ:

ನಗರದ ಮುಖ್ಯ ರಸ್ತೆಗಳಲ್ಲಿನ ಡಿವೈಡರ್‌ಗಳ ನಡುವೆ ಹೊಸ ತಳಿಯ ಸಸಿ ನೆಡುವ ಮೂಲಕ ಹಸಿರೀಕರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ನಗರದ ಗಂಜ್ ಪ್ರದೇಶದಿಂದ ಶಾಸಿö ಚೌಕವರೆಗಿನ ಸುಮಾರು ಒಂದುವರೆ ಕಿಮೀ ಉದ್ದದ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ಈ ಕೆಲಸ ಆರಂಭವಾಗಿದೆ. ಈ ಸ್ಥಳದಲ್ಲಿ ಹಿಂದೆ ಬೆಳೆಸಲಾಗಿದ್ದ ದುಬೈ ಗಿಡಗಳನ್ನು ಕಡಿದು ಹಾಕಲಾಗಿದ್ದು, ಇವುಗಳಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಸಾರ್ವಜನಿಕರ ಮತ್ತು ಸಂಘ, ಸಂಸ್ಥೆಗಳ ಆರೋಪ ಹಿನ್ನೆಲೆಯಲ್ಲಿ ಕಳೆದ ೧೫ ದಿನಗಳ ಹಿಂದೆ ನೂರಾರು ಗಿಡಗಳನ್ನು ತೆಗೆದುಹಾಕಲಾಗಿತ್ತು.
ಈಗ ಆ ಸ್ಥಳದಲ್ಲಿ ಪ್ರತ್ಯೇಕ ಗುಂಡಿ ತೊಡಿ, ಮಣ್ಣು ಹಾಕಿ ನೀರು ಸುರುವಿ ನಂತರ ಸಸಿಗಳನ್ನು ನೆಟ್ಟು ಅದರ ಮೇಲೆ ಗೊಬ್ಬುರ ಹಾಕಿ ನೆಡುವ ಕೆಲಸ ಭರದಿಂದ ನಡೆದಿದೆ. ಇಲ್ಲಿನ ಪ್ರಾದೇಶಿಕ ಅರಣ್ಯ ವಲಯದಿಂದ ಈ ಕೆಲಸ ಮಾಡಲಾಗುತ್ತಿದ್ದು, ನೆರೆಯ ಆಂಧ್ರ ರಾಜಮಂಡ್ರಿಯಿಂದ ಮತ್ತು ಇಲ್ಲಿನ ನರ್ಸರಿಗಳಿಂದ ಒಟ್ಟು ೯೦೦ ಸಸಿಗಳನ್ನು ತರಿಸಲಾಗಿದೆ. ಇವುಗಳಲ್ಲಿ ಬಕುಳ, ಕದಂಬ, ಸ್ಟೇಟೋಜಿಯಾ, ಟೊಕೊಮಾ ಹೆಸರಿನ ಹೂ ಬಿಡುವ ಸಸಿಗಳನ್ನು ತಂದು ಇಲ್ಲಿ ನೆಡಲಾಗುತ್ತಿದೆ.
ಈ ಸಸಿಗಳನ್ನು ನೆಟ್ಟು ಅವುಗಳಿಗೆ ನಿತ್ಯ ನೀರು ಹಾಕಿ, ಕೆಡದಂತೆಯೇ ಮತ್ತು ಜನ, ಜಾನುವಾರುಗಳಿಂದ ರಕ್ಷಣೆ ಮಾಡುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದ್ದು, ಇದಕ್ಕಾಗಿ ಈ ಎಲ್ಲ ರಸ್ತೆಗಳಲ್ಲಿ ಕಾಯಲು ಮತ್ತು ನೊಡಿಕೊಳ್ಳಲು ಸಿಬ್ಬಂದಿ ನೇಮಿಸಿದೆ. ಸುಮಾರು ಎರಡು ವರ್ಷಗಳ ಕಾಲ ಇವುಗಳ ಸಂರಕ್ಷಣೆ ಮಾಡುವ ಹೊಣೆ ಪ್ರಾದೇಶಿಕ ಅರಣ್ಯ ಇಲಾಖೆ ಹೊತ್ತುಕೊಂಡಿದೆ.
ಸುಮಾರು ೩ಲಕ್ಷ ರೂ.ವೆಚ್ಚದಲ್ಲಿ ಆರಂಭಿಕ ಕೆಲಸ ಶುರುಮಾಡಲಾಗಿದ್ದು, ಕಾಲಕ್ರಮೇಣ ನಗರದಲ್ಲಿ ಎಲ್ಲೆಡೆ ಈ ತರಹದ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆ ಮತ್ತು ಹಸಿರೀಕರಣಕ್ಕೆ ಮುಂದಾಗಿದೆ.

ಎಲ್ಲೆಡೆ ಇರುವ ದುಬೈ ಸಸಿಗಳ ತೆರವು

ನಗರದ ಮೈಲಾಪುರ ಅಗಸಿ, ಚಿತ್ತಾಪುರ ರಸ್ತೆ, ಹತ್ತಿಕುಣಿ ರಸ್ತೆ ಸೇರಿ ವಿವಿಧ ಮುಖ್ಯ ರಸ್ತೆಗಳಲ್ಲಿ ದುಬೈ ಗಿಡಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿವೆ. ಅಲ್ಲದೆ ಜಿಲ್ಲಾಡಳಿತದ ಭವನದ ಆವರಣದ ಬಹುತೇಕ ಕಡೆ ಸಾವಿರಾರು ದುಬೈ ಗಿಡ-ಮರ ಬೆಳೆದು ನಿಂತಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ತೆಗೆದು ಆ ಎಲ್ಲ ಸ್ಥಳಗಳಲ್ಲೂ ಆರೋಗ್ಯಪೂರ್ಣ ವಿವಿಧ ಹೆಸರಿನ ಸಸಿಗಳನ್ನು ನೆಡುವ ಮೂಲಕ ಜಿಲ್ಲಾ ಕೇಂದ್ರ ಸ್ಥಾನದ ಈ ನಗರಕ್ಕೆ ಹೊಸ ಲುಕ್ ನೀಡಲು ಪ್ರಾದೇಶಿಕ ಅರಣ್ಯ ಇಲಾಖೆ ಮುಂದಾಗಿದೆ.
"

ದುಬೈ ಗಿಡ-ಮರಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಸಿಎ-ï ಅಽಕಾರಿ ಸೂಚನೆ ಮೇರೆಗೆ ಅವುಗಳನ್ನು ತೆರವುಗೊಳಿಸಲಾಗಿದೆ. ಆ ಸ್ಥಳದಲ್ಲಿ ಈಗ ಕಳೆದ ಮೂರು ದಿನಗಳಿಂದ ಬೇರೆ, ಬೇರೆ ಹೆಸರಿನ ಸಸಿ ನೆಡುವ ಕೆಲಸ ಆರಂಭಿಸಲಾಗಿದೆ. ಈಗಾಗಲೇ ೩೩೦ ಸಸಿಗಳನ್ನು ನೆಡಲಾಗಿದೆ. ಇನ್ನೂ ಒಂದು ವಾರದಲ್ಲಿ ಉಳಿದ ೫೭೦ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ.| ಬುರಾನೊದ್ಧೀನ್ವಲಯ ಅರಣ್ಯಾಽಕಾರಿ, ಪ್ರಾದೇಶಿಕ ವಲಯ ಯಾದಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net