ಉತ್ಸವದ ಮೊದಲ ದಿನ ಫೆ.13ರಂದು ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಕೃಷಿ, ಕರಕುಶಲ, ಕೈಗಾರಿಕೆ, ಪುಸ್ತಕ ಪ್ರದರ್ಶನ, ಆಹಾರ ಮೇಳ, ವಿಚಾರ ಸಂಕಿರಣ, ದೋಣಿ ವಿಹಾರಗಳು ನಡೆಯಲಿವೆ. ಅಂದು ಸಂಜೆ ಮುಖ್ಯ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಸ್ಮಾರಕಗಳ ದೀಪಾಲಂಕಾರ, ಡ್ರೋನ್ ಶೋ, ಧ್ವನಿ-ಬೆಳಕು ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಫೆ.14ರಂದು ಗ್ರಾಮೀಣ ಕ್ರೀಡೆಗಳು, ಕವಿಗೋಷ್ಠಿ, ಗಾಳಿಪಟ ಉತ್ಸವ ನಡೆಯಲಿದ್ದು, ಫೆ.15ರಂದು ಯುವಗೋಷ್ಠಿ, ಜಾನಪದ ವಾಹಿನಿ ಮೆರವಣಿಗೆಯೊಂದಿಗೆ ಸಾಂಸ್ಕೃತಿಕ ಸಂಭ್ರಮ ಮುಕ್ತಾಯಗೊಳ್ಳಲಿದೆ.