ಮಾ. 26ರಂದು ರಾಮನವಮಿಯ ದಿನ ದಿನಪೂರ್ತಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಬೆಳಿಗ್ಗೆ 8 ಕ್ಕೆ ಪಂಚಾಮೃತ ಅಭಿಷೇಕ, ಬೆಳಗ್ಗೆ 8.30 ರಿಂದ 9.30 ರವರೆಗೆ ಹಂಸ ನಾಯಕ ಮತ್ತು ಲಕ್ಷ್ಮಿ ನಾರಾಯಣ ಪಾರಾಯಣ ಸಂಘಗಳಿಂದ ಪಾರಾಯಣ ಕಾರ್ಯಕ್ರಮ ನೆರವೇರಲಿದೆ. 9.30 ರಿಂದ 11.30 ರವರೆಗೆ ವೈಷ್ಣವಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, 11 ಗಂಟೆಗೆ ಶ್ರೀರಾಮ ಅಷ್ಟೋತ್ತರ 12 ಗಂಟೆಗೆ ಮಹಾಪೂಜೆ 12:30ಕ್ಕೆ ಶ್ರೀರಾಮ ಜನನ,ತೊಟ್ಟಿಲು ಸೇವೆ,ಮಧ್ಯಾಹ್ನ ಒಂದು ಗಂಟೆಗೆ ಪ್ರಸಾದ ವಿತರಣೆ ಹಾಗೂ ರಾತ್ರಿ 8 ಗಂಟೆಗೆ ಪಲ್ಲಕ್ಕಿ ಉತ್ಸವ ಮತ್ತು 8.30ಕ್ಕೆ ಶ್ರೀರಂಗ ಪೂಜೆ ನೆರವೇರಲಿದೆ ಎಂದು ರಾಮ ಮಂದಿರದ ಕಿಶೋರ ದೇಶಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.