

ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು 111ನೇ ಜಯಂತಿ ಆಚರಣೆ ಅಂಗವಾಗಿ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಈಚೆಗೆ ಪೂರ್ವಭಾವಿ ಸಭೆ ಜರುಗಿತು. ಡಿ.ದೇವರಾಜ ಅರಸು ಅವರ ಜನಪರ ಆಡಳಿತ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸ್ಮರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಜಯಂತಿ ಆಚರಿಸುವ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಇಲಾಖೆಗಳ ಜವಾಬ್ದಾರಿ, ಸಿದ್ಧತೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಿ ಅಧಿಕಾರಿಗಳು ಮತ್ತು ಮುಖಂಡರಿಂದ ಸಲಹೆ&ಸೂಚನೆ ಪಡೆಯಲಾಯಿತು. ತಾಪಂ ಇಒ ಸಂಜೀವ ಜುನ್ನೂರ, ಅಭಿಯಂತ ಮಹೇಶ ಹೂಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೃತ್ಯುಂಜಯ ಚಿನಗುಡಿ, ಅಶೋಕ ಹೊಸಕೇರಿ, ಜಯಾನಂದ ನರಸನ್ನವರ, ಎಇಇ ತೌಫೀಕ್ ಶೇಖ್, ಎಂ.ಐ.ಕುಟ್ರಿ, ಪಿಎಸ್ಐ ಸಂತೋಷ, ಡಾ.ಮಹಾಂತೇಶ ಕಳ್ಳಿಬಡ್ಡಿ, ಮೋಹನಗೌಡ ಪಾಟೀಲ, ಚಂದ್ರಶೇಖರ ಕೊಪ್ಪದ, ಪ್ರಕಾಶ ಬಡ್ಲಿ, ಶ್ರೀಶೈಲ ಯಡಳ್ಳಿ, ಅಶೋಕ ವಾಲಿ, ವಿರೂಪಾಕ್ಷ ಹಂಪಣ್ಣವರ, ಮಲ್ಲಪ್ಪ ಮುರಗೋಡ, ಸಂಜು ಮುರಗೋಡ ಇತರರಿದ್ದರು.