ಕಕ್ಕೇರಾ ಸಮೀಪದ ಏದಲಭಾವಿ ಗ್ರಾಮದಲ್ಲಿ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರೈತ ಸಂಪರ್ಕ ಕೇಂದ್ರದ ಅಽಕಾರಿ ಶ್ರೀಧರ್ ಎಸ್. ಮಾತನಾಡಿದರು. ಚನ್ನಬಸವ ನಾಯಕ, ಸೋಮಣ್ಣ ಗುಮೇದಾರ, ಮಲ್ಲಿಕಾರ್ಜುನ ಭೋವಿ ಇತರರಿದ್ದರು.
ರೈತರು ಬೆಳೆಗಳಿಗೆ ಕೀಟನಾಶಕ ಸಿಂಪಡಿಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಟ್ಟಣದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶ್ರೀಧರ್ ಎಸ್. ಹೇಳಿದರು.
ಏದಲಬಾವಿ ಗ್ರಾಮದಲ್ಲಿ ಕಕ್ಕೇರಾ ರೈತ ಸಂಪರ್ಕ ಕೇಂದ್ರದಿಂದ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೀಟನಾಶಕ ಬಳಸುವಾಗ ಮುನ್ನೆಚ್ಚರಿಕೆ ವಹಿಸಿದಾಗ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅವರು ಹೇಳಿದರು.
ಕೀಟನಾಶಕ ಬಳಸುವ ಮೊದಲು ಕೀಟ/ರೋಗವನ್ನು ಸರಿಯಾಗಿ ಗುರುತಿಸಿ ಅಗತ್ಯವಿದ್ದಲ್ಲಿ ಮಾತ್ರ ಔಷಧ ಬಳಸಬೇಕು. ಲೇಬಲ್‌ದಲ್ಲಿರುವ ಬೆಳೆ ಕೀಟ, ಪ್ರಮಾಣ ಮತ್ತು ಮುನ್ನೆಚ್ಚರಿಕೆ ಪರಿಶೀಲಿಸಬೇಕು. ಅವಽ ಮೀರಿದ ಕೀಟನಾಶಕ ಬಳಸಬೇಡಿ. ಶಿಫಾರಸ್ಸು ಮಾಡದ ಎರಡು ಅಥವಾ ಹೆಚ್ಚು ಕೀಟನಾಶಕಗಳನ್ನು ಸ್ವಯಂಪ್ರೇರಿತವಾಗಿ ಮಿಶ್ರಣ ಮಾಡಬೇಡಿ. ಕೀಟನಾಶಕ ಸಿಂಪಡಿಸುವಾಗ ಕೈಗವಸು, ಮುಖ, ಕಣ್ಣಿನ ರಕ್ಷಣೆ ಮತ್ತು ರಕ್ಷಣಾ ಉಡುಪು ಕಡ್ಡಾಯವಾಗಿ ಬಳಸಬೇಕು.
ಗಾಳಿ ಹೆಚ್ಚು ಬೀಸುವ ವೇಳೆ ಕೀಟನಾಶಕ ಸಿಂಪರಣೆ ಮಾಡಬೇಡಿ. ಸಿಂಪಡಿಸುವಾಗ ಆಹಾರ ಸೇವಿಸುವುದು, ನೀರು ಕುಡಿಯುವುದು ಅಥವಾ ತಂಬಾಕು ಉತ್ಪನ್ನ ಬಳಸುವುದು ಮಾಡಕೂಡದು. ಮಕ್ಕಳು ಮತ್ತು ಇತರ ಅನಗತ್ಯ ವ್ಯಕ್ತಿಗಳನ್ನು ಸಿಂಪಡಣೆ ಪ್ರದೇಶದಿಂದ ದೂರವಿಡಬೇಕು. ಔಷಧ ದೇಹದ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಬೇಕು. ಸಿಂಪರಣೆ ನಂತರ ಕೈ, ಮುಖ ಮತ್ತು ಸಿಂಪರಣೆಗೆ ಬಳಸಿದ ಉಪಕರಣಗಳನ್ನು ಚನ್ನಾಗಿ ಸ್ವಚ್ಛಗೊಳಿಸಬೇಕು. ಕೀಟನಾಶಕವನ್ನು ಆಹಾರ ಮತ್ತು ಪಶು ಆಹಾರ ಅಥವಾ ಕುಡಿಯುವ ನೀರಿನ ಬಳಿ ಇಡಬೇಡಿ. ಖಾಲಿ ಪ್ಯಾಕೇಟ್/ಬಾಟಲಿಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು.
ಪ್ರಸ್ತುತ ಬೆಳೆ ಬೆಳೆದ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು ರೈತರು ತಮ್ಮ ಜಮೀನುಗಳಲ್ಲಿ ಬೆಳೆಯ ಜಿಪಿಎಸ್ ಮಾಡಿಸಬೇಕು ಹಾಗೂ ಮುಂದಿನ ಕಂತಿನ ಹಣ ಜಮೆಯಾಗಬೇಕಾದರೆ ರೈತರು ಕಡ್ಡಾಯವಾಗಿ ಪಿಎಂ ಕಿಸಾನ್ ಬಯೋಮೆಟ್ರಿಕ್ ಇ-ಕೆವೈಸಿ ರೈತರಿಗೆ ತಿಳಿ ಹೇಳಿದರು.
ಈ ವೇಳೆ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಅಽಕಾರಿ ಚನ್ನಬಸವ ನಾಯಕ, ಸೋಮಣ್ಣ ಗುಮೇದಾರ, ಮಲ್ಲಿಕಾರ್ಜುನ ಭೋವಿ, ಹಣಮಂತ್ರಾಯಗೌಡ ಪೊಲೀಸ್ ಪಾಟೀಲ್, ಭೀಮಣ್ಣಗೌಡ, ರಾಮಣ್ಣಗೌಡ ಗುರಿಕಾರ, ಸಂಗಮೇಶ ಕಡಕಲ್, ದಸ್ತಗೀರಸಾಬ ಯಲಗೋಡ, ಗುಂಡಪ್ಪ ಕೋಸಗಿ, ಸಾಮಣ್ಣ ಗಿರಣಿ, ಸೋಮಣ್ಣ ಬಂದೊಡ್ಡಿ, ಮುತ್ತಣ್ಣ ಬಾಚಾಳ ಇತರರಿದ್ದರು.