ಶೂ ಧರಿಸಿ ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಫೋಟೋಶೂಟ್ ಆರೋಪ; ಸ್ಥಳೀಯರ ಗುಂಪಿನಿಂದ ಪ್ರವಾಸಿಗರ ಮೇಲೆ ಹಲ್ಲೆ Pre-Wedding Shoot

pre-wedding shoot bettada bhairaveshwara
pre-wedding shoot bettada bhairaveshwara
Published on

ಪ್ರಮುಖ ಮುಖ್ಯಾಂಶಗಳು

  • ಶೂ ಧರಿಸಿ ದೇವಾಸ್ಥಾನದಲ್ಲಿ ಫೋಟೋ ಶೂಟ್ ಮಾಡ್ತಿದ್ದ ಗುಂಪಿನ ಮೇಲೆ ಸ್ಥಳೀಯರಿಂದ ಹಲ್ಲೆ
  • ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಸ್ಥಳೀಯರಿಂದ ಗಲಾಟೆ
  • ಹಲ್ಲೆ ನಡೆಸಿದ ಗುಂಪಿನ ವಿರುದ್ಧ ದೂರು ದಾಖಲಿಸಿ ಏಳು ಜನರನ್ನು ಬಂಧಿಸಿದ ಪೊಲೀಸರು

ಆರೋಪಿಗಳು ಅರೆಸ್ಟ್

ಶೂ ಧರಿಸಿ ಫೋಟೋ ಶೂಟ್​ ನಡೆಸುತ್ತಿದ್ದಾರೆ ಎಂದು ಹಲ್ಲೆ ಮಾಡಿದ ಮೂಡಿಗೆರೆ ತಾಲೂಕಿನ ಏಳು ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ಆಶಿ, ಪ್ರಶಾಂತ್, ರಕ್ಷಾ, ಅರವಿಂದ್, ಉಚ್ಚಿತ್, ಪ್ರಜ್ವಲ್ ಮತ್ತು ನಿಶಾಂತ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಛಾಯಾಗ್ರಾಹಕ ನವಿ ಮತ್ತು ನಂದನನನ್ನು ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ?

ಬೆಟ್ಟದ ಭೈರವೇಶ್ವರ ದೇವಸ್ಥಾನ ಸುತ್ತಲು ಹಚ್ಚ ಹಸಿರಾದ ರಮಣೀಯ ದೃಶ್ಯ ನೋಡಲು ಸಿಗುತ್ತದೆ. 700 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನದ ನಿರ್ಮಾಣವೇ ಅದ್ಭುತ. ಈ ಸ್ಥಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್​ ಮಾಡಿಸಿಕೊಳ್ಳಬೇಕು ಎಂದು ದಂಪತಿ ಸೇರಿದಂತೆ ಕ್ಯಾಮೇರಾ ತಂಡ ತಯಾರಿ ನಡೆಸಿಕೊಳ್ಳುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯರು, ಛಾಯಗ್ರಾಹಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮುಂದುವರೆದು,'ಇಲ್ಲಿ ವಿಡಿಯೋ ಶೂಟ್​ ಮಾಡುತ್ತಿರೋದು ಯಾಕೆ? ಅನುಮತಿ ಕೊಟ್ಟೋರು ಯಾರು?' ಎಂದು ಪ್ರಶ್ನಸಿದ್ದಾರೆ. ಅದಕ್ಕೆ ಪ್ರವಾಸಿ ತಂಡವು, `ದೇವಸ್ಥಾನದ ಫೋಟೋ ತೆಗೆಯಲು ಯಾರ ಪರ್ಮಿಶನ್ ಕೇಳಬೇಕು. ಫೋಟೋ ತೆಗೆದ್ರೆ ಸಮಸ್ಯೆ ಏನಿದೆ'ಎಂದು ಮರು ಉತ್ತರ ಕೊಟ್ಟಿದ್ದಾರೆ.

ಕಾರಣನೇ ಇಲ್ಲದೇ ಥಳಿತ

ಎರಡು ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯರ ಗುಂಪು ಫೋಟೋಗ್ರಾಫರ್​ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಯಾಕೆ ಹೊಡೆಯುತ್ತಿದ್ದೀರಿ ಈಗೇನಾಯ್ತು ಎಂದು ಕೇಳಿದ್ದಕ್ಕೂ ಉತ್ತರ ಕೊಡದೇ, ಮನಬಂದಂತೆ ಪ್ರವಾಸಿಗರಿಗೆ ಥಳಿಸಿದ್ದಾರೆ ಎನ್ನಲಾಗಿದೆ.
ದೇವಸ್ಥಾನದಲ್ಲಿ ಉದ್ವಿಗ್ನಗೊಂಡ ವಾತಾವರಣ ಕಂಡು ಪೊಲೀಸರಿಗೆ ಘಟನಾ ಸ್ಥಳದಲ್ಲಿದ್ದ ಪ್ರವಾಸಿಗರು ದೂರು ನೀಡಿದ್ದಾರೆ. ಮಾಹಿತಿ ತಿಳಿಯುತ್ತಲೇ ಸಕಲೇಶಪುರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕ್ಯಾಮೆರಾಗೆ ಹಾನಿ

ಸಕಲೇಶಪುರದ ಪೊಲೀಸ್​ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಪರಸ್ಪರ ಎರಡು ಗುಂಪು ದೂರು ನೀಡಿದ್ದು, ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸ್ಥಳೀಯರು ನಡೆಸಿದ ಹಲ್ಲೆಯಿಂದಾಗಿ ಒಂದು ಕ್ಯಾಮೆರಾ ಕೂಡ ಹಾನಿಗೊಳಗಾಗಿದೆ.

ಟ್ರೆಂಡ್ ಆಗಿದೆ ಪ್ರೀ ವೆಡ್ಡಿಂಗ್ ಶೂಟ್

ಇತ್ತೀಚೆಗೆ ಪ್ರೀ ವೆಡ್ಡಿಂಗ್​ ಶೂಟ್​ ಟ್ರೆಂಡ್​ ಆಗಿದೆ. ಕೆಲವರು ತಮ್ಮ ಹುಟ್ಟೂರಲ್ಲಿ ತಮ್ಮ ಪೂರ್ವಜರ ಕಾಯಕವನ್ನೇ ಮಾಡುತ್ತಾ ಫೋಟೋ ಶೂಟ್ ಮಾಡಿಸಿಕೊಂಡರೆ, ಇನ್ನೂ ಕೆಲವರು ವಿದೇಶದಲ್ಲಿ ಅಥವಾ ದೇಶದ ಪ್ರಸಿದ್ಧ ಪ್ರವಾಸಿ ತಣದಲ್ಲಿ ಮಾಡಿಸಿಕೊಳ್ಳುತ್ತಾರೆ. ಇದು ಜೋಡಿಯ ಮಧ್ಯೆ ಇರುವ ಅನೋನ್ಯತೆಯನ್ನು ಹಾಗೂ ನೆನಪುಗಳನ್ನು ಶಾಶ್ವತಗೊಳಿಸಲು ಬಾಂಧವ್ಯವನ್ನು ಪ್ರದರ್ಶಿಸಲು ಜನಪ್ರಿಯವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net