ಚಿಂಚೋಳಿ: ವಿದ್ಯಾರ್ಥಿ ಜೀವನ ಮಹತ್ವದ್ದಾಗಿದ್ದು, ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಕಠಿಣ ಪರಿಶ್ರಮದೊಂದಿಗೆ ವಿದ್ಯಾರ್ಜನೆ ಮಾಡಬೇಕು ಎಂದು ಶಾಸಕ ಡಾ. ಅವಿನಾಶ ಜಾಧವ್ ಕರೆ ನೀಡಿದರು. ಚಂದಾಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರದಂದು ಆಯೋಜಿಸಿದ್ದ ಕ್ರೀಡೆ, ಸಾಂಸ್ಕೃ‘ತಿಕ, ಎನ್ಎಸ್ಎಸ್, ಸ್ಕೌಟ್ಸ್-ಗೈಡ್ಸ್, ರೇಂರ್ಜಸ್ ಮತ್ತು ರೋವರ್ಸ್ ಸೇರಿ ವಿವಿಧ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸದೆಡೆಗೆ ಗಮನ ಹರಿಸಿದಾಗ ಮಾತ್ರ ನಿಮ್ಮ ಕನಸು ಸಾಕಾರಗೊಳಿಸಿಕೊಳ್ಳಲು ಸಾಧ್ಯ ಎಂದರು. ಪ್ರಾಂಶುಪಾಲ ಪ್ರೊ.ಬಸವರಾಜ ಎಂ. ಕೊನೇರಿ, ಪ್ರೊ. ಶಿವಶರಣಪ್ಪ ಗೊಳ್ಳೆ, ಡಾ.ಮಿರಾಜ್ ಪಾಷ, ಡಾ.ಬಸವರಾಜೇಶ್ವರಿ ಹಾಲು, ಡಾ. ಸಂತೋಷ ಕಟಕೆ, ಡಾ. ಸತೀಶಕುಮಾರ, ಅನ್ನಪೂರ್ಣ ಸೇಡಂಕರ್, ಶ್ರೀಮಂತ ಕಟ್ಟಿಮನಿ, ಕೆ.ಎಂ.ಬಾರಿ, ಗೋಪಾಲರಾವ ಕಟ್ಟಿಮನಿ, ಸತೀಶರೆಡ್ಡಿ, ಅನೀಲ ಕಂಟ್ಲಿ, ರಾಜು ಪವಾರ್, ಗೋಪಾಲ ಕಲಬಾವಿ ಇತರರಿದ್ದರು.