ಗ್ರಾಮದೇವತೆ ಆರಾಧನೆಯಿಂದ ದಾರಿದ್ರ್ಯ ದೂರ

ಅಫಜಲಪುರ ತಾಲೂಕಿನ ಬಳೂರಗಿಯಲ್ಲಿ  ಮಹಾಲಕ್ಷ್ಮಿ ದೇವಸ್ಥಾನ ಲೋಕಾರ್ಪಣೆ ನಿಮಿತ್ತ ಮಂಗಳವಾರ ನೂತನ ಶಿಲಾ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಅಫಜಲಪುರ ತಾಲೂಕಿನ ಬಳೂರಗಿಯಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಲೋಕಾರ್ಪಣೆ ನಿಮಿತ್ತ ಮಂಗಳವಾರ ನೂತನ ಶಿಲಾ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುರು ಶಾಂತಲಿಂಗ ಶಿವಾಚಾರ್ಯರು ನುಡಿ
  • ಬಳೂರಗಿಯಲ್ಲಿ ಮೂರ್ತಿಯ ಭವ್ಯ ಮೆರವಣಿಗೆ
ಅಫಜಲಪುರ: ಬಳೂರಗಿಯಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಲೋಕಾರ್ಪಣೆ ಪ್ರಯುಕ್ತ ಶ್ರೀ ಮಹಾಲಕ್ಷ್ಮಿ ಮಾತೆಯ ಶಿಲಾಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಅದ್ದೂರಿ ಮೆರವಣಿಗೆ ನಡೆಸಿ ಸಡಗರ&ಸಂಭ್ರಮದಿಂದ ಸ್ವಾಗತಿಸಲಾಯಿತು.
ಮೆರವಣಿಗೆಯುದ್ದಕ್ಕೂ ಮುತೆದೆಯರ ಕುಂಭ, ಕಳಶ, ಆರತಿ ಹೊತ್ತು ಹೆಜ್ಜೆ ಹಾಕಿದರು. ತಮಟೆ, ಡೊಳ್ಳು ಕುಣಿತ, ಮಂಗಳವಾದ್ಯಗಳು ಗಮನಸೆಳೆದರು. ದಾರಿಯುದ್ದಕ್ಕೂ ಭಕ್ತರು ನೀರು ಚೆಲ್ಲಿ, ಕಾಯಿ ಕರ್ಪೂರ ಅರ್ಪಿಸಿ ದರ್ಶನ ಪಡೆದರು. ಮಹಾಲಕ್ಷ್ಮಿ ಮಾತಾಕಿ ಜೈ.. ಜೈ ಮಾತಾದಿ.. ಸೇರಿ ವಿವಿಧ ೂಷಗಳು ಮೊಳಗಿದವು.
ಸಂಜೆ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಶ್ರೀ ಗುರು ಶಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಗ್ರಾಮ ದೇವತೆಯ ಪ್ರತಿಷ್ಠಾಪನೆಯಿಂದ ದಾರಿದ್ರ್ಯ ದೂರವಾಗಿ ಸಂಪತ್ತು ಪ್ರಾಪ್ತಿಯಾಗುತ್ತದೆ. ನಿತ್ಯ ದೇವರ ನಾಮ ಸ್ಮರಣೆಯಿಂದ ಸಂಕಷ್ಟ ದೂರವಾಗುತ್ತವೆ. ಭಾರತ ದೇಶದ ಶ್ರೀಮಂತ ಪರಂಪರೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರಮುಖರಾದ ಅರವಿಂದ ದೊಡ್ಡಮನಿ, ಹಣಮಯ್ಯ ಗುತ್ತೇದಾರ್​, ಶರಣಪ್ಪ ದೊಡ್ಡಮನಿ, ಸುಭಾಷ ಗುತ್ತೇದಾರ್​, ಶ್ರೀಮಂತ ಪಾಟೀಲ್​, ಗೌರಿಶಂಕರ ಸೊನ್ನ, ಅನಿಲ್​ ಪೊದ್ದಾರ, ಸಿದ್ದಣ್ಣ ಹಸರಗುಂಡಗಿ, ದತ್ತು ಪೂಜಾರಿ, ವಿಜಯಕುಮಾರ ಪಾಟೀಲ್​, ಅಣ್ಣಾರಾಯ ಪಾಟೀಲ್​, ಶಿವಶರಣಪ್ಪ ಕಗ್ಗೋಡ, ಸಿದ್ದು ಲಗೇರಿ, ಶರಣಪ್ಪ ದೊಡ್ಡಮನಿ, ಶಿವಾನಂದ ಸ್ಥಾವರಮಠ, ಈರಯ್ಯ ಹಿರೇಮಠ, ವೀರೇಶ ಪಾಟೀಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net