ಕಾಲುವೆಗೆ ನೀರು ಹರಿಸಿ

ಬಾಲಚಂದ್ರ ಜಾರಕಿಹೊಳಿ ಮನವಿ
ಬಾಲಚಂದ್ರ ಜಾರಕಿಹೊಳಿ ಮನವಿ
Published on
ಗೋಕಾಕ: ಘಟಪ್ರಭಾ ಬಲದಂಡೆ ಕಾಲುವೆ (ಜಿಆರ್​ಬಿಸಿ) ಯ ದುರಸ್ತಿ ಕಾಮಗಾರಿ ಭಾಗಶ@ ಪೂರ್ತಿಯಾಗಿದ್ದು, ಜನ&ಜಾನುವಾರುಗಳ ಹಿತದಷ್ಟಿಯಿಂದ ಹಿಡಕಲ್​ ಜಲಾಶಯದಿಂದ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಕೋರಿದ್ದಾರೆ. ಮೂಡಲಗಿ ಮತ್ತು ಗೋಕಾಕ ತಾಲೂಕುಗಳಲ್ಲಿ ಮಳೆಯಾಗದ್ದರಿಂದ ಬೇಸಿಗೆಯಲ್ಲಿ ಜನ& ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹಿಡಕಲ್​ ಜಲಾಶಯದಿಂದ ಪ್ರತಿ ಸಲವೂ ಮೂರೂ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆಯಾದರೂ ಈ ಬಾರಿ ಟಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದರಿಂದ ಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಿಲ್ಲ. ಈಗ ಕಾಮಗಾರಿಯು ಮುಗಿದಿರುವುದರಿಂದ ಜೂ.5ರಿಂದ 10 ದಿನಗಳವರೆಗೆ ಜಿಆರ್​ಬಿಸಿ ಕಾಲುವೆಗೆ ನಿತ್ಯ 2,000 ಕ್ಯೂಸೆಕ್​ನಂತೆ ಕುಡಿಯುವ ನೀರು ಬಿಡುಗಡೆ ಮಾಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net