ಈ ನಡುವೆ ಕೃಷ್ಣಗಿರಿ ಪಶ್ಚಿಮ ಜಿಲ್ಲೆಯ ಕಾಂಗ್ರೆಸ್ ಅಧ್ಯರಾಗಿ ಬಂದಿರುವ ಹರೀಶ್ಬಾಬು ಈ ಬಗ್ಗೆ ವಿವರಣೆ ನೀಡಿದ್ದು, ಯಾವುದೇ ರೀತಿಯ ಸ್ಥಾನ ಬದಲಾವಣೆ ಇದುವರೆಗೂ ನಡೆದಿಲ್ಲ ಎಂದಿದ್ದಾರೆ. ಅದಾದ ಬಳಿಕ ಬೆಂಗಳೂರಿನಲ್ಲಿ ತಮಿಳುನಾಡು ಪದ ಉಸ್ತುವಾರಿ ಸೂರಜ್ ಹೆಗ್ಡೆ ಅವರನ್ನು ಭೇಟಿ ಮಾಡಿದ ಹರೀಶ್ ಬಾಬು, ನಗರ ಅಧ್ಯ ಸಿ.ತ್ಯಾಗರಾಜನ್, ಹೊಸೂರು ವಿಧಾನಸಭಾ ೇತ್ರ ಉಸ್ತುವಾರಿ ಮೈಜ ಅಕ್ಬರ್ ಮತ್ತು ಕೆಲಮಂಗಲ ಬ್ಲಾಕ್ ಅಧ್ಯ ಸುಂದರ್ ಸೇರಿ ಹಲವು ಕಾರ್ಯಕರ್ತರು ಈ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸ್ಪಂದಿಸಿರುವ ಸೂರಜ್ ಹೆಗ್ಡೆ, ಮುಂಬರುವ ದಿನಗಳಲ್ಲಿ ಎಲ್ಲ ಸ್ಥಾನಗಳಿಗೆ ಚುನಾವಣೆ ಮೂಲಕ ಕಾರ್ಯಕರ್ತರ ಸಮ್ಮುಖದಲ್ಲಿ ಮುಖ್ಯಸ್ಥರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.